ಮಹಾರಾಷ್ಟ್ರ : 'ತುಳುಕೂಟ ಫೌಂಡೇಶನ್ ನಾಲಾಸೋಪಾರ' ಇದರ ಮಹಿಳಾ ವಿಭಾಗ ಮತ್ತು 'ಶ್ರೀದೇವಿ ಯಕ್ಷಕಲಾ ನಿಲಯ' ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮ ನಾಲಾಸೋಪಾರ ಪಶ್ಚಿಮದ ಹೋಟೆಲ್ ಗ್ಯಾಲಕ್ಸಿ ಸಭಾಂಗಣದಲ್ಲಿ ಜರಗಿತು. ತುಳುಕೂಟದ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್ ಮತ್ತು ಪದಾಧಿಕಾರಿಗಳು ಶ್ರೀ ದೇವರಿಗೆ ಆರತಿ ಬೆಳಗಿಸಿ ಪ್ರಾರ್ಥನೆಯನ್ನು ಮಾಡಿ ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಿಂದ ಭಜನೆ, ಸ್ವಾಗತ ನೃತ್ಯ. ಸಂಗೀತ ಕಾರ್ಯಕ್ರಮಗಳು ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ತುಳುಕೂಟ ಫೌಂಡೇಶನ್‌ನ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇನ್ನಂಜೆಯವರು ಅಧ್ಯಕ್ಷತೆಯಲ್ಲಿ ಪ್ರತೀವರ್ಷ ನೀಡುವ ಡಾ. ಸುನೀತಾ ಎಮ್ ಶೆಟ್ಟಿ ಪ್ರಾಯೋಜಕತ್ವದ 'ತುಳುನಾಡ ಐಸಿರಿ' ಪ್ರಶಸ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ನೀಡಿ ಸನ್ಮಾನಿಸಿ ಮಾತನಾಡುತ್ತಾ ನಮ್ಮ ಸಂಸ್ಥೆ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿಕೊಂಡರೆ ತುಳು ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಮಗೆ ಸಹಕಾರ ಹಾಗೂ ಶಕ್ತಿಯನ್ನು ತುಂಬುತ್ತಾರೆ. ಇದು ಅಭಿಮಾನವಾಗುತ್ತದೆ. ಸಂಸ್ಥೆಯು ಸ್ಥಾಪನೆಯಾದಂದಿನಿಂದ ಯಶಸ್ವೀ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಭಜನೆ, ಕುಣಿತ ಭಜನೆಯಲ್ಲಿ ನಮ್ಮವರು ಬಹುಮಾನ ಪಡೆಯುತ್ತಿದ್ದಾರೆ. ಸರಕಾರವು ನಮಗೆ ಪ್ರಶಸ್ತಿ ನೀಡಿ ನಮ್ಮ ಕಾರ್ಯವನ್ನು ಮೆಚ್ಚಿದೆ. ಇಂದು ಡಾ. ಸುನೀತಾ ಶೆಟ್ಟಿಯವರ ಹೆಸರಲ್ಲಿ ಪ್ರಶಸ್ತಿ ನೀಡಿದ್ದೇವೆ. ಇಷ್ಟರವರೆಗೆ ಪ್ರಶಸ್ತಿ ಸ್ವೀಕರಿಸಿದವರ ಸಾಧನೆ ನಿಜಕ್ಕೂ ಪ್ರಶಂಸನೀಯ. ನಮ್ಮ ಎರಡೂ ಸಂಸ್ಥೆಗಳಲ್ಲಿ ಬಹಳ ಸಂಖ್ಯೆಯಲ್ಲಿ ಯುವ ಸದಸ್ಯರಿದ್ದು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಮಕ್ಕಳ ಪಾಲಕರ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ಅದೇ ರೀತಿ ತರಬೇತಿ ನೀಡುತ್ತಿರುವ ಶಿಕ್ಷಕ. ಯಾವುದೇ ಕಾರ್ಯಕ್ರಮವನ್ನು ಬಹಳ ಯಶಸ್ಸಿಯಾಗಿ ನಡೆಸಲು ಸಹಕರಿಸಿದ್ದು ಸದಸ್ಯರಿಗೆ ಅಭಿನಂದನೆಗಳು. ನಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ನಮ್ಮ ಸಂಘವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆದು ಒಂದು ಮಾದರಿ ಸಂಘಟನೆ ಮಾಡುವಲ್ಲಿ ಶ್ರಮಿಸೋಣ. ಹೊಸತಾಗಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆರಾಗಿರುವ ಯಶೋಧ ಕೋಟ್ಯಾನ್ ಮತ್ತವರ ತಂಡ ಬಹಳ ಯಶಸ್ವಿ ಕಾರ್ಯಕ್ರಮವನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಇಂದು ಸನ್ಮಾನ ಸ್ವೀಕರಿಸಿಕೊಂಡವರು ಜಿಲ್ಲೆಯಲ್ಲಿ ಪ್ರಸಿದ್ಧ ಸಮಾಜಸೇವಕರು. ಆದರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು ಸನ್ಮಾನ ಸ್ವೀಕರಿಸಲು ಊರಿನಿಂದ ಸ್ವಂತ ಖರ್ಚಿನಿಂದ ಬಂದಿರುತ್ತಾರೆ, ಇದು ಅವರ ಸರಳತೆಯನ್ನು ತಿಳಿಸುತ್ತದೆ. ಮನುಷ್ಯನಿಗೆ ಯಾವುದೇ ಸಂದರ್ಭದಲ್ಲಿ ಕೂಡ ಅಹಂಕಾರ ಬರಬಾರದು ಅದರಿಂದ ಅವನತಿಗೆ ಕಾರಣವಾಗುತ್ತದೆ. ಯಾರ ಮಾತಿಗೂ ಕಿವಿಯಾಗದೆ ಸೇವಕರಾಗುವ ಮೂಲಕ, ನಾವು ನಮ್ಮ ಜೀವನವನ್ನು ಹೆಚ್ಚು ಅರ್ಥಪೂರ್ಣ ಮತ್ತು ಸಂತೋಷಕರವಾಗಿಸುವ, ಒಗ್ಗಟ್ಟಿನಲ್ಲಿ ಸೇವೆ ಮಾಡಿದಾಗ ಫಲ ಎಲ್ಲರಿಗೂ ಲಭಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಟಿ ಲಿಮಿಟೆಡ್ ನ ನಿರ್ದೇಶಕಿ ಸಿಎ ರಾಜಶ್ರೀ ಜಿ. ಶೆಟ್ಟಿ ಅವರು ಮಾತನಾಡುತ್ತಾ ಈ ಪರಿಸರದಲ್ಲಿ ತುಳುಕೂಟ ಎಲ್ಲಾ ಸಮಾಜದವರನ್ನು ಒಟ್ಟು ಮಾಡಿ ಅವರಿಗೆ ಭಾಷೆ, ಸಂಸ್ಕೃತಿಯನ್ನು .ಕಲೆಯನ್ನು ತಿಳಿಸುವ, ಕಲಿಸುವ ಸೇವೆ ಮಾಡುತ್ತಿರುವುದು ಅಭಿಮಾನವಾಗಿದೆ. ಇಂದಿನ ಯುವ ಜನಾಂಗ ನಮ್ಮ ಭಾಷೆಯನ್ನು ಮಾತನಾಡುವುದರಲ್ಲಿ ಹಿಂಜರಿಯುತ್ತಾರೆ. ಮಕ್ಕಳು ಖಂಡಿತವಾಗಿ ನಮ್ಮ ಮಾತೃ ಭಾಷೆಯನ್ನು ಮಾತನಾಡಬೇಕು, ಅದಕ್ಕೆ ಭಯಪಡುವುದು ಅಥವಾ ಪರೀಕ್ಷೆ ಕಟ್ಟುವುದು ಅಗತ್ಯವಿಲ್ಲ. ಭಾಷೆಯ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಒಬ್ಬ ಹೆಣ್ಣಿನ ತಪ್ಪಿನಿಂದ ಸಂಪೂರ್ಣ ಕುಲವನ್ನು ದೂಷಿಸುವುದು ತಪ್ಪು. ಪುರುಷ ಮತ್ತು ಮಹಿಳೆ ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದು, ಒಬ್ಬರಿಲ್ಲದೆ ಮತ್ತೊಬ್ಬರ ಜೀವನ ಸಾಧ್ಯವಿಲ್ಲ. ಸಮಾಜದಲ್ಲಿ ಸಮಾನತೆ, ಪರಸ್ಪರ ಗೌರವ ಮತ್ತು ವಿನಯಶೀಲತೆ ಅಗತ್ಯ . ಪ್ರತಿ ಒಬ್ಬನಲ್ಲೂ ವಿನಮ್ರತೆಯ ಮಾತುಗಳಿರಬೇಕು ಎಲ್ಲರಿಗೂ ಒಂದೊಂದು ರೀತಿಯ ತೊಂದರೆಗಳು. ಸಮಸ್ಯೆಗಳಿರುತ್ತದೆ. ಆದ್ದರಿಂದ ಬದುಕಿನಲ್ಲಿ ಸಂಸ್ಕಾರಯುತವಾಗಿ ಬದುಕು ಸಾಗಿಸಬೇಕು. ಇಂದಿನ ಯುವ ಜನಾಂಗಕ್ಕೆ ನನ್ನದೊಂದು ಸಂದೇಶ ನೀವು ಬದುಕಿ ಇನ್ನೊಬ್ಬರನ್ನು ಬದುಕುವುದಕ್ಕೆ ದಾರಿ ಮಾಡಿ. ಕೋವಿಡ್ ನ ಬಳಿಕ ಮನುಷ್ಯನ ಸಾವು ಯಾವ ಸಂದರ್ಭದಲ್ಲಿ ಬರುತ್ತದೆ ಎನ್ನುವುದು ಅಸಾಧ್ಯ, ಬದುಕಿರುವಾಗ ನಮ್ಮ ಮನೆ ಅವರಿಗೆ ನಮ್ಮವರಿಗೆ ಸಹಾಯ ಮಾಡುವ ಕಾರ್ಯವನ್ನು ಮಾಡುತ್ತಾ ಇರೋಣ ಎಂದು ನುಡಿದರು.
.
ತಿಥಿಯಾಗಿ ಆಗಮಿಸಿದ್ದ ಸಾಹಿತಿ. ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಮಾತನಾಡಿ ಇಂದು ಕಾರ್ಯಕ್ರಮ ನಿಜ ಅರ್ಥದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಾಗಿರುತ್ತದೆ. ಕಾರಣ ಉಡುಪಿ ಜಿಲ್ಲೆಯಲ್ಲಿ ಅನಾಥರಾಗಿದ್ದ .ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯರಿಗೆ ಸಹಕಾರ ನೀಡುತ್ತಿರುವ ವಿಶು ಶೆಟ್ಟಿಯವರನ್ನು ಸನ್ಮಾನಿಸಿ ದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದೇ ಪ್ರಶಸ್ತಿಯನ್ನು ಎರಡು ವರ್ಷಗಳ ಹಿಂದೆ ನಾನು ಸ್ವೀಕರಿಸಿಕೊಂಡಿದ್ದೇನೆ. ತುಳುಕುಟದ ಮೂಲಕ ಭಾಷೆಯನ್ನು ಉಳಿಸುವ ಕೆಲಸ ನಡೆಯುತ್ತಿದೆ ಯಕ್ಷಗಾನ ಮತ್ತು ನಾಡಿನ ಕಲೆಗಳನ್ನು ಬೆಳೆಸುವ ಇಲ್ಲಿ ಕಾರ್ಯ ನಡೆಯುತ್ತಿದೆ. ಕನ್ನಡ ನಾಡಿನ ಸಂಸ್ಕೃತಿ ಗೆ ಈ ಪ್ರದೇಶದಲ್ಲಿ ಕೊರತೆ ಇಲ್ಲ. ಇಂದಿನ ಮಹಿಳೆಯರಲ್ಲಿ ಡಿಗ್ರಿ ಗಳಿದೆ ಆದರೆ. ನಮ್ಮನ್ನು ನಾವು ಗುರುತಿಸಿಕೊಳ್ಳುವುದಿಲ್ಲ .ನಾವೆಲ್ಲರೂ ಮಹಿಳೆಯರಾಗಿ ಹುಟ್ಟಿರುವುದಕ್ಕೆ ಹೆಮ್ಮೆಪಡುವನು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳೋಣ. ಎಲ್ಲರಲ್ಲಿ ಕೂಡ ಪ್ರತಿಭೆಗಳಿದೆ. ಗುರುತಿಸಿಕೊಳ್ಳುವುದಿಲ್ಲ. ನಮ್ಮ ಅಭಿರುಚಿಯ ಕ್ಷೇತ್ರಗಳಲ್ಲಿ ಬೆಳೆಯಬೇಕು. ಅದರೊಟ್ಟಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಮರೆಯದಿರೋಣ. ಕಳೆದು ಹೋದ ನಿನ್ನೆ ದಿನಗಳ ಬಗ್ಗೆ ಚಿಂತಿಸದೆ. ಈ ದಿನದ ಬಗ್ಗೆ ಚಿಂತಿಸುತ್ತಾ ಬದುಕನ್ನು ಸಂತೋಷದಿಂದ ಮುನ್ನಡೆಸುವ. ನಮಗೆ ನಾವೇ ಶಿಲ್ಪಿಗಳು ಆಗೋಣ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ ಯೋಗ ಗುರು ಸುಮತಿ ಓಮಯ್ಯ ಪೂಜಾರಿ ಮಾತನಾಡಿ ಸಂಸ್ಥೆ ಬಗ್ಗೆ ನಾನು ಬಹಳ ಹತ್ತಿರದಿಂದ ಕಂಡವಳು , ಹೆಣ್ಣೊಬ್ಬಳು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಬೆಳೆಯಬೇಕಿದ್ದರೆ ಅವರಿಗೆ ಗಂಡನ ಆಶ್ರಯಬೇಕಾಗಿದೆ. ಕಳೆದ 25 ವರ್ಷಗಳಿಂದ ಯೋಗದ ಅನುಭವವನ್ನು ಪಡೆದು ಯೋಗ ಶಿಕ್ಷಕಿಯಾಗಿ ಸಮಾಜಕ್ಕೆ ನನ್ನ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಇದಕ್ಕೆ ನನ್ನ ಪತಿಯ ಸಹಕಾರದಿಂದ ಸಾಧ್ಯವಾಗಿದೆ. ಆರೋಗ್ಯವಾಗಿದ್ದರೆ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಹಿಂದೆ ಯಾರಿಗೂ ಯೋಗದ ಅಗತ್ಯವಿರಲಿಲ್ಲ ಯಾಕೆಂದರೆ ಅವರ ಎಲ್ಲಾ ಮನೆ ಕೆಲಸಗಳಲ್ಲಿ ಯೋಗದಷ್ಟೇ ವ್ಯಾಯಾಮ ಸಿಗುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ, ಆಧುನಿಕ ಸೌಲಭ್ಯಗಳು ಸಿಕ್ಕಿರುವುದರಿಂದ ಕಷ್ಟದ ಕೆಲಸ ಕಡಿಮೆಯಾಗಿದೆ. ಆದ್ದರಿಂದ ಮಾನಸಿಕವಾಗಿ ಮತ್ತು ಆರೋಗ್ಯವಾಗಿ ಮಹಿಳೆಯರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ಮಹಿಳೆಯರು ಯೋಗ ತರಬೇತಿಯನ್ನು ಅಭ್ಯಾಸವನ್ನು ಮಾಡಬೇಕಾಗಿ ವಿನಂತಿಸಿ ನಿಮಗೆ. ಯೋಗದ ಬಗ್ಗೆ ಯಾವುದೇ ರೀತಿಯ ಮಾಹಿತಿ ಅಗತ್ಯವಿದ್ದಲ್ಲಿ ತುಳು ಕೂಟವನ್ನು ಸಂಪರ್ಕಿಸಿ ಎಂದು ನುಡಿದರು.
ಮೀರಾ-ಡಹಾಣು ಬಂಟ್ಸ್ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ ಅವರು ಮಾತನಾಡಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಶಶಿಧರ್ ಶೆಟ್ಟಿ ಅವರು ಮಕ್ಕಳಿಗೆ ಯಕ್ಷಗಾನ. ಭಾಷೆ, ಕ್ರೀಡೆ ಹೀಗೆ ಎಲ್ಲಾ ವಿಧದಲ್ಲೂ ಅವರನ್ನು ಸಮಾಜದಲ್ಲಿ ಬೆಳೆಸುವಲ್ಲಿ ಸಹಕಾರ ನೀಡುತ್ತಿರುವುದನ್ನು ನೋಡಿದ್ದೇನೆ. ಅದರೊಟ್ಟಿಗೆ ಮಕ್ಕಳಿಗೆ ಜೀವನದ ಪಾಠ . ಮತ್ತು ಆತ್ಮಶೈರ್ಯ ತುಂಬುವ ಮಾರ್ಗದರ್ಶನದ ಶಿಬಿರವನ್ನು ಮುಂದಿನ ದಿನಗಳಲ್ಲಿ ಸಂಸ್ಥೆ ಮಾಡಬೇಕು ಅದರಿಂದ ಮಕ್ಕಳು ಸುದೃಢವಾಗಿ ಬೆಳೆಯಲು ಸಾಧ್ಯವಾಗುತ್ತಾರೆ. ಇಂಥ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡುವುದು ಅಗತ್ಯವಿದೆ, ನಗರದಲ್ಲಿ ಬಹಳಷ್ಟು ಸಂಘಟನೆಗಳಿದೆ ಆದರೆ ಇಂಥ ಕೆಲಸಗಳನ್ನು ಮಾಡುವುದು ಬಹಳ ಕಡಿಮೆ,
ಶಶಿಧರ್ ಶೆಟ್ಟಿ ಅವರಲ್ಲಿ ಸಾಮರ್ಥ್ಯವಿದೆ ನಿಮ್ಮ ಮುಂದಾಳತ್ವದಲ್ಲಿ ಮಾಡಬೇಕು . ಮಹಿಳೆಯರು ತಮ್ಮ ಯಾವುದೇ ಜವಾಬ್ದಾರಿಯ ಕೆಲಸಗಳನ್ನು ಕಾನೂನು ಬದ್ದವಾಗಿ ಮಾಡಬೇಕು. ಸರಕಾರ ಬಹಳಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ ವಸಯಿ ತಾಲೂಕಾ ಮಹಾ ನಗರ ಪಾಲಿಕೆಯಲ್ಲೂ ಕೂಡ ಸರ್ಕಾರದ ಬಹಳಷ್ಟು ಯೋಜನೆಗಳಿದೆ ಅದನ್ನು ನಮ್ಮವರು ಪಡೆಯುವಂತಾಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ತುಳು ಕನ್ನಡಿಗರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್ ಸ್ವಾಗತಿಸುತ್ತಾ ಪರಿಸರದ ಎಲ್ಲಾ ದಾನಿಗಳು ಮತ್ತು ಮಹಿಳಾ ಸದಸ್ಯರ ಸಹಕಾರದಿಂದ ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ. ನಿಮ್ಮೆಲ್ಲರ ನಿರಂತರ ಪ್ರೋತ್ಸಾಹ ನಮಗಿರಲಿ ಎಂದರು.
ವೇದಿಕೆಯಲ್ಲಿ ತುಳುಕೂಟ ಫೌಂಡೇಶನ್‌ನ ಗೌರವಾಧ್ಯಕ್ಷ ಓ. ಪಿ. ಪೂಜಾರಿ, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸಲಹೆಗಾರ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಕಾರ್ಯದರ್ಶಿ ಜಗನಾಥ್ ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ರಾಜೇಶ್ ಕರ್ಕೇರ, ಜೊತೆ ಕೋಶಾಧಿಕಾರಿ ಸೀತಾರಾಮ್ ಕೋಟ್ಯಾನ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್, ಸಂಚಾಲಕಿ ಜಯ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಮಲ್ಲಿಕಾ ರಮೇಶ್ ಪೂಜಾರಿ, ಕೋಶಾಧಿಕಾರಿ ನಳಿನಿ ಎಸ್. ಪೂಜಾರಿ, ಜೊತೆ ಕಾರ್ಯದರ್ಶಿ ಸುರೇಖಾ ಬಂಗೇರ, ಜೊತೆ ಕೋಶಾಧಿಕಾರಿ ಶೋಭಾ ಆರ್. ಸುವರ್ಣ, ಸಲಹೆಗಾರರಾದ ಶಶಿಕಲಾ ಶಶಿಧರ್ ಶೆಟ್ಟಿ, ಮತ್ತು ಉಷಾ ಶ್ರೀಧರ್ ಶೆಟ್ಟಿ,ಕಾರ್ಯಕ್ರಮ ಸಮಿತಿಯ ಕಾರ್ಯ ಧ್ಯಕ್ಷ ಅರುಣಾ ಎ ಶೆಟ್ಟಿ , ಯುವ ವಿಭಾಗದ ಪದಾಧಿಕಾರಿ , ಹಾಗೂ ಶ್ರೀದೇವಿ ಯಕ್ಷಕಲಾ ನಿಲಯದ , ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಆರ್ ಪೂಜಾರಿ ಮತ್ತು ವಾಣಿ ರಘುನಾಥ್ ಕಣ್ವತೀರ್ಥನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯ ಪ್ರಶಸ್ತಿ ವಿಜೇತ ತಂಡ 'ಶ್ರೀ ಕೃಷ್ಣ ಕಲಾವಿದರು ಉಡುಪಿ' ಕಲಾವಿದರಿಂದ 'ಅನಿದಾ ಮನದಾನಿ' ತುಳು ನಾಟಕ 100 ಪ್ರದರ್ಶನಗೊಂಡಿದ್ದು..ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡಿದ್ದರು.
ಚಿತ್ರ ವರದಿ ದಿನೇಶ್ ಕುಲಾಲ್

.jpeg)
0 Comments