Ticker

6/recent/ticker-posts

Ad Code

ಹುರುಪು ಮೂಡಿಸಿದ ಎನ್ ಡಿ ಎ ಅಭ್ಯರ್ಥಿ ಕೆ. ಸುರೇಂದ್ರನ್ ರ ರೋಡ್ ಶೋ

ಕಾಸರಗೋಡು: ಮಂಜೇಶ್ವರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ರೋಡ್ ಶೋ ಉತ್ಸಾಹ ಹುರುಪಿನಿಂದ ಮೂಡಿ ಬಂತು. ಶುಕ್ರವಾರ ಸಂಜೆ  ಬಾಯಿಕಟ್ಟೆಯಿಂದ ಪ್ರಾರಂಭವಾದ ರೋಡ್ ಶೋ ಪೈವಳಿಕೆ ನಗರದಲ್ಲಿ ಕೊನೆಗೊಂಡಿತು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದ ರೋಡ್ ಶೋ ಅನ್ನು  ಸಂಸದ ಬ್ರಿಜೇಶ್ ಚೌಟ  ಉದ್ಘಾಟಿಸಿದರು. 

ಮಂಜೇಶ್ವರದ ಅಭಿವೃದ್ಧಿಗಾಗಿ ಕೆ. ಸುರೇಂದ್ರನ್ ಅವರನ್ನು ವಿಜಯಶಾಲಿಯಾಗಿಸಬೇಕು ಎಂದು ಅವರು ಹೇಳಿದರು. ರೋಡ್ ಶೋನಲ್ಲಿ ಸುರೇಂದ್ರನ್ ಮತ್ತು ನರೇಂದ್ರ ಮೋದಿ ಅವರ ಚಿತ್ರಗಳು, ಕೇಸರಿ, ಹಸಿರು, ಬಲೂನ್‌ಗಳು ಮತ್ತು ಬಿಜೆಪಿ ಧ್ವಜಗಳನ್ನು ಹೊತ್ತ ಕಾರ್ಯಕರ್ತರು ಮೆರವಣಿಗೆಗೆ ಕಳೆ ಏರಿಸಿದ್ದರು.

ಶಾಸಕ ಭರತ್ ಶೆಟ್ಟಿ , ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸತೀಶ್ಚಂದ್ರ ಭಂಡಾರಿ ಕೋಳಾರು, ಸುರೇಶ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ರೈ, ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ,ಅನಿಲ್ ಕುಮಾರ್ ಕೆ.ಪಿ, ಮೊದಲಾದವರು  ಭಾಗವಹಿಸಿದ್ದರು.

Post a Comment

0 Comments