ಮಂಜೇಶ್ವರ : ಯುವಕನೊಬ್ಬ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಉದ್ಯಾವರ ತಹಾನಿ ಮಂಜಿಲ್‌ನಲ್ಲಿರುವ ನ್ಯೂ ಮಸೀದಿ ಮನೆಯ ಮುಹಮ್ಮದ್ ತಹಾ (22)ಮೃತಪಟ್ಟ ಯುವಕ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯವರು ಈದ್ ಉಲ್ ಫಿತರ್ ಹಬ್ಬದ ಕಾರಣ ಸಂಬಂಧಿಕರ ಮನೆಗೆ ತೆರಳಿರುವ ವೇಳೆ ಇವರು ಆತ್ಮಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಮುಹಮ್ಮದ್ ಅಶ್ರಫ್, ತಾಯಿ ತಾಹಿರಾ, ಒಡಹುಟ್ಟಿದವರಾದ ತಹಾನಿ, ತಾನ್ಸಿ ಎಂಬಿವರನ್ನಗಲಿದ್ದಾರೆ.

0 Comments