ಕಾಸರಗೋಡು : ಉದುಮ ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಸಿ ಎಚ್ ಕುಂಞಂಬು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಚುನಾವಣಾಧಿಕಾರಿಯಾದ ಸಹಾಯಕ ಜಿಲ್ಲಾಧಿಕಾರಿ ಅವರ ಮುಂದೆ ತಮ್ಮ ನಾಮಪತ್ರ ಸಲ್ಲಿಸಿದರು. ಮಂಡಲ ಚುನಾವಣಾ ಸಮಿತಿ ಅಧ್ಯಕ್ಷ ಟಿ ಕೃಷ್ಣನ್, ಕಾರ್ಯದರ್ಶಿ ಕೆ ವಿ ಕುಂಞಿರಾಮನ್,ಎಡರಂಗದ ನಾಯಕರಾದ ಪಿ ಕರುಣಾಕರನ್, ಕೆ ಕುಂಞಿರಾಮನ್, ಎಂ ಎ ಲತೀಫ್, ಮೊಯ್ದೀನ್ ಕುಂಞಿ ಕಳನಾಡ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ನಾಮ ಪತ್ರಿಕೆ ಸಲ್ಲಿಕೆಗೆ ಆಗಮಿಸಿದ ಮೆರವಣಿಗೆಯ ನೇತೃತ್ವವನ್ನು ಎಂ ಸುಮತಿ, ಇ ಪದ್ಮಾವತಿ, ಸಿ ಜೆ ಮ್ಯಾಥ್ಯೂ, ವಿ ರಾಜನ್, ಟಿ ಎಂ ಕರೀಮ್, ಮಧು ಮುದಿಯಕಲ್, ಬಿಜು ಉಣ್ಣಿತ್ತಾನ್ ಮೊದಲಾದವರು ವಹಿಸಿದ್ದರು.

0 Comments