Ticker

6/recent/ticker-posts

Ad Code

ಮಾ 29ರಿಂದ ನೆಲ್ಲಿಕುಂಜೆ ದೇವಸ್ಥಾನ ಬ್ರಹ್ಮಕಲಶ : ಸಿದ್ಧತೆ ಅಂತಿಮ, ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು

 

ಪೆರ್ಲ : ಎಣ್ಮಕಜೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿಯ ಸಂಗಮ ಪ್ರದೇಶ ನೆಲ್ಲಿಕುಂಜೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ದೇಲಂಪಾಡಿಯ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಮಾ.29ರಿಂದ ಎ.3ರ ವರೆಗೆ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮಾಹಿತಿ ನೀಡಿದರು. ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 29ರಂದು ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಆಗಮಿಸಲಿದೆ. ಸಂಜೆ 5ಕ್ಕೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ ಎಂದರು.

ಮಾ.30ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಉಪನ್ಯಾಸಕ ಡಾ.ರವೀಶ ಪಡುಮಲೆ ಧಾರ್ಮಿಕ ಭಾಷಣ ಮಾಡುವರು. 3ರಂದು  ಶ್ರೀ ವಿಷ್ಣುಮೂರ್ತಿ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ ನೆರವೇರಲಿದೆ. ಮಧ್ಯಾಹ್ನ 3ಕ್ಕೆ ಎಡನೀರು ಸ್ವಾಮೀಜಿ ಆಶೀರ್ವಚನ ನೀಡುವರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಮಾನಾಥ ರೈ ಮೇಗಿನ ಕಡಾರು, ಡಾ.ಮೇಘಶ್ಯಾಮ್ ನೆಲ್ಲಿಕುಂಜೆ, ಮಹೇಶ್ ಗುತ್ತು, ಶ್ರೀಕೃಷ್ಣ ಭಟ್, ದಾಸಪ್ಪ ರೈ ನೆಲ್ಲಿಕುಂಜೆ, ತಾ.ಸತೀಶ್ ಪುಣಿಂಚಿತ್ತಾಯ, ರಾಜಶೇಖರ್ ನೆಲ್ಲಿಕುಂಜೆ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments