Ticker

6/recent/ticker-posts

Ad Code

ಅನಂತಪುರ ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷೆ : ಎಸೆದವರಿಂದಲೇ ಹೆಕ್ಕಿಸಿ ಜಾಗೃತಿ ಮೂಡಿಸಿದ ಪಂ.ಸದಸ್ಯ


 ಸೀತಾಂಗೋಳಿ : ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ  ಪರಿಸರದ ರಸ್ತೆ ಬದಿಯಲ್ಲಿ ಪಯ್ಯನ್ನೂರಿನ ಆಸ್ಪತ್ರೆ ಮಾಲಿನ್ಯಗಳನ್ನು ತಂದೆಸೆದವರನ್ನು ಸ್ಥಳೀಯ ಗ್ರಾ. ಪಂ. ಸದಸ್ಯನ  ನೇತೃತ್ವದಲ್ಲಿ ಮರಳಿ ಕರೆಸಿ, ಎಸೆದಲ್ಲಿಂದಲೇ ಹೆಕ್ಕಿಸಿದ ಘಟನೆ ಜಾಗೃತಿ ಮೂಡಿಸುವಲ್ಲಿ ಮಾದರಿಯಾಗಿದೆ. 

ಅನಂತಪುರದ ರಸ್ತೆ ಬದಿ ಗೋಣಿ ಚೀಲಗಳಲ್ಲಿ ಆಸ್ಪತ್ರೆ ಮಾಲಿನ್ಯವನ್ನು ಉಪೇಕ್ಷಿಸಲಾಗಿತ್ತು. ಇದು ಗಮನಕ್ಕೆ ಬಂದಾಗ ಪಂ. ಸದಸ್ಯ ಸತೀಶ ಸ್ಥಳಕ್ಕಾಗಮಿಸಿ, ಗ್ರಾ. ಪಂ. ನೌಕರರನ್ನು ಕರೆಸಿದರು. ಬಳಿಕ ಮಾಲಿನ್ಯ ತಪಾಸಿಸಿದಾಗ ಅದರಿಂದ ಪಯ್ಯನ್ನೂರಿನ ಬಿಕೆಎಂ ಆಸ್ಪತ್ರೆಯ ಬಿಲ್ ಪತ್ತೆಯಾಯಿತು. ಅದರಲ್ಲಿದ್ದ ನಂಬರಿನ ಮೂಲಕ ಆಸ್ಪತ್ರೆ ಸಂಪರ್ಕಿಸಿ ಮಾಲಿನ್ಯ ಎಸೆದವರನ್ನು ಮರಳಿ ಆನಂತಪುರಕ್ಕೆ ಕರೆಸಲಾಯಿತು. ಅನಂತರ ಅವರಿಂದಲೇ ಎಸೆದ ಮಾಲಿನ್ಯ ಹೆಕ್ಕಿಸಿ, ಗ್ರಾ. ಪಂ. ಕಡೆಯಿಂದ ಎಚ್ಚರಿಕೆ ನೀಡಲಾಯಿತು. ಇಂಥ ಅಪರಾಧ ಪುನರಾವರ್ತಿಸಿದರೆ ದಂಡ  ಸಹಿತ ಶಿಕ್ಷೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂಬ ಎಚ್ಚರಿಕೆಯೊಂದಿಗೆ ಮಾಲಿನ್ಯ ಎಸೆದವರಿಗೆಎಚ್ಚರಿಕೆ ನೀಡಿ ಬಿಡಲಾಯಿತು.

Post a Comment

0 Comments