ಬೆಳ್ಳೂರು: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಮಾ.3ರಿಂದ ಮಾ.7ರವರೆಗೆ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಮಾ.2ರಂದು ಬೆಳಗ್ಗೆ ಉಧ್ವಾರ್ಚನೆಯಾಗಿ ಮಹಾ ನೈವೇದ್ಯ ಸಮರ್ಪಣೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಮಧ್ಯಾಹ್ನ ಬಳಿಕ ನಾನಾ ಭಾಗಗಳಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ಸಭಿಕರ ಕೂಡುವಿಕೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಉತ್ಸವ ಸಾಮಗ್ರಿಗಳನ್ನು ಉಗ್ರಾಣದಲ್ಲಿ ಶೇಖರಿಸುವುದು, ಮಾ. 3ರಂದು ಪೂರ್ವಾಹ್ನ ಬಲಿವಾಡು ಕೂಟ, 9.30ರಿಂದ 10.15ರ ಮುಹೂರ್ತದಲ್ಲಿ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ (ಚಂದ್ರಗ್ರಹಣ ನಿಮಿತ್ತ 10.30ರಿಂದ 12ರ ವರೆಗೆ), ರಾತ್ರಿ 8ಕ್ಕೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ.
ಫೆ.4ರಂದು ಬೆಳಗ್ಗೆ 7ಕ್ಕೆ ಶ್ರೀ ದೇವರ ಉತ್ಸವ ಬಲಿ, ತುಲಾಭಾರ ಸೇವೆ, ರಾತ್ರಿ 8ಕ್ಕೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ಫೆ.5ರಂದು ಬೆಳಗ್ಗೆ 7ಕ್ಕೆ ಶ್ರೀ ದೇವರ ಉತ್ಸವ ಬಲಿ, ತುಲಾಭಾರ ಸೇವೆ, ರಾತ್ರಿ 8ಕ್ಕೆ ಶ್ರೀ ದೇವರ ನಡು ದೀಪೋತ್ಸವ, ಫೆ.6ರಂದು ಬೆಳಗ್ಗೆ 7ಕ್ಕೆ ಶ್ರೀ ದೇವರ ಉತ್ಸವ ಬಲಿ, ತುಲಾಭಾರ ಸೇವೆ, ರಾತ್ರಿ 8ಕ್ಕೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ಶಯನ ಸೇವೆ, ಫೆ.7ರಂದು ಬೆಳಗ್ಗೆ 8.30ಕ್ಕೆ ಸಭಿಕರ ಕೂಡುವಿಕೆಯಿಂದ ಪ್ರಾರ್ಥನೆ, ಶಯನೋದ್ಘಾಟನೆ, ರಾತ್ರಿ 8ಕ್ಕೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ಅವಭೃತ ಸ್ನಾನ, ಶ್ರೀ ದುರ್ಗಾಸೇವೆ, 12ಕ್ಕೆ ವಿಶೇಷ ಬೆಡಿ ಸೇವೆ, ಶ್ರೀ ದೇವರ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ಫೆ.8ರಂದು ಬೆಳಗ್ಗೆ ದ್ವಜಾವರೋಹಣ, ಮಂಗಳಾರತಿ, ನವಕಾಭಿಷೇಕ, ಮಂತ್ರಾಕ್ಷತೆ, ಫೆ.9ರಂದು ಸಂಜೆ 4ಕ್ಕೆ ಶ್ರೀ ದೇವರ ಪ್ರಧಾನ ದೈವ ಹುಲಿ ಭೂತ ಮತ್ತು ಪಟ್ಟದರಸು ಬೀರ್ನಾಳ ದೈವಗಳ ನೇಮ, ಅರಶಿನ ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.5ರಂದು ರಾತ್ರಿ 7ರಿಂದ ಓಂ ಶಿವ ನೆಟ್ಟಣಿಗೆ ಮಕ್ಕಳಿಂದ ನೃತ್ಯ ವೈಭವ, 8.45ರಿಂದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ, ಮಾ.7ರಂದು ರಾತ್ರಿ 7.30ರಿಂದ ಮಹಾದೇವ ಕೈಕೊಟ್ಟುಕಳಿ ನೆಟ್ಟಣಿಗೆ ತಂಡದ ಕೈಕೊಟ್ಟುಕಳಿ, 9ರಿಂದ ಸಾಮಾಜಿಕ ಕಾರ್ಯಕರ್ತ ಶಶಿಧರ ಗೋಳಿಕಟ್ಟೆ ಪ್ರಾಯೋಜಕತ್ವದಲ್ಲಿ ಸಮಾಜರತ್ನ ಬಿರುದು ಪುರಸ್ಕೃತ ಕೇಶವ ಕನಿಲ ಸಾರಥ್ಯದಲ್ಲಿ ಇಂಚರ ಮೆಲೋಡಿಸ್ ಮಂಗಳೂರು ಸಾದರಪಡಿಸುವ "ನೆಟ್ಟಣಿಗೆ ನೈಟ್-2026" ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

0 Comments