ಪುತ್ತಿಗೆ: ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯ 50 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಪೋಷಕಾಹಾರ ಕಿಟ್ ವಿತರಿಸಲಾಯಿತು. ಪಂಚಾಯತ್ ನ ವಿವಿಧ ವಾರ್ಡ್‌ಗಳ ವಿಧವೆಯರು ಮತ್ತು ಬಡವರಿಗೆ ಪೋಷಕಾಹಾರ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಕುಮಾರಿ ಫಿದಾ ಉಜಂಪದವ್ ಪೋಷಕಾಹಾರ ಕಿಟ್ ನೀಡಿ ಉದ್ಘಾಟಿಸಿದರು, ಉಪಾಧ್ಯಕ್ಷ ಇ.ಕೆ.ಮುಹಮ್ಮದ್ ಕುಂಞಿ, ಅಭಿವೃದ್ಧಿ ಅಧ್ಯಕ್ಷೆ ಸೆಕಿನಾ ಶೆರೀಫ್, ಕ್ಷೇಮಕಾರ್ಯ ಸಮಿತಿ ಅಧ್ಯಕ್ಷ ಸತೀಶ, ಆರೋಗ್ಯ ಶಿಕ್ಷಣ ಅಧ್ಯಕ್ಷೆ ಅನಿತಾ, ಬ್ಲಾಕ್ ಸದಸ್ಯ ಜುನೈದ್ ಉರ್ಮಿ, ಪಂಚಾಯತು ಸದಸ್ಯರಾದ ಕೇಶವ ಎಸ್.ಆರ್, ಬಾಲಕೃಷ್ಣ ಗುತ್ತು, ಶಿವಪ್ಪ ರೈ, ಪಂಚಾಯತು ಕಾರ್ಯದರ್ಶಿ ಸುಧೀಶ, ಎ.ಎಸ್.ಜೋಬಿ, ಪರಿಶಿಷ್ಟ ವರ್ಗ ಪ್ರೊಮೋಟರ್ ಆಶಾ ಮತ್ತಿತರರು ಉಪಸ್ಥಿತರಿದ್ದರು.

0 Comments