Ticker

6/recent/ticker-posts

Ad Code

ಮಧ್ಯ ವಯಸ್ಕ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ : ಮೀನುಗಾರರಿಂದ ರಕ್ಷಣೆ

 
ಮಂಗಳೂರು : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಮಧ್ಯ ವಯಸ್ಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆತನನ್ನು ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಪಂಪ್ ವೆಲ್ ನಾಗುರಿ ನಿವಾಸಿಯೊಬ್ಬರು ರವಿವಾರ  ಸೇತುವೆಯಿಂದ ನದಿಗೆ ಹಾರಿದ್ದರು. ಕೆಳಗಡೆ ಮೀನುಗಾರಿಕೆಯಲ್ಲಿ ನಿರತರಾಗಿದ್ದವರು ತಕ್ಷಣವೇ ನದಿಗೆ ಹಾರಿ ವ್ಯಕ್ತಿಯನ್ನು ದೋಣಿಗೆ ಎಳೆದು ಬಳಿಕ ಪ್ರಾಥಮಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೀನುಗಾರರಾದ ಜಮಾಲ್, ಇದಿನಬ್ಬ ಮತ್ತು ಮೈಯ್ಯದಿ ಎಂಬ ಮೀನುಗಾರರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನೇತ್ರಾವತಿ ಸೇತುವೆಗೆ ಅಳವಡಿಸಲಾದ ಬೇಲಿ ವಾಹನ ಅಪಘಾತದಿಂದ ಮುರಿದು ಹೋಗಿತ್ತು. ಲಕ್ಷಾಂತರ ವ್ಯಯಿಸಿ ನಿರ್ಮಿಸಿದ ತಡೆಬೇಲಿಯ ದುರಸ್ತಿಗೆ ಇಲಾಖೆಗಳು ಮುಂದಾಗಲಿಲ್ಲ. ಇದೀಗ ಅಲ್ಲಿಂದಲೇ ವ್ಯಕ್ತಿ ಹಾರಿರುವ ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.

Post a Comment

0 Comments