ಪೆರ್ಲ : ಎಣ್ಮಕಜೆ ಪಂಚಾಯತ್ ಕಚೇರಿ ಮತ್ತು ಸಂಬಂಧಿತ ಸಂಸ್ಥೆಗಳ ಬೆಲೆ ಬಾಳುವ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಹರಾಜು ಪ್ರಕ್ರಿಯೆಯಿಲ್ಲದೆ ಮಾರಾಟಗೈದ ಯುಡಿಎಫ್ ಆಡಳಿತದ ಹಗಲು ದರೋಡೆ ವಿರುದ್ಧ ಸಿಪಿಐಎಂ ಮತ್ತು ಡಿವೈಎಫ್ ಐ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮುಂಭಾಗ ಮಾರ್ಚ್ 23ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಧರಣಿ ನಡೆಯಲಿದೆ.ಎಣ್ಮಕಜೆ ಪಂಚಾಯತ್ ಗೆ ಒಳಪಟ್ಟ ಪೀಠೋಪಕರಣ ಸಹಿತ ಇಲೆಕ್ಟ್ರಾನಿಕ್ ವಸ್ತುಗಳನ್ನು ಪಂ.ಉಪಾಧ್ಯಕ್ಷ ಸಹಿತ ಆಡಳಿತರೂಢ ಪಕ್ಷದ ಜನಪ್ರತಿನಿಧಿಯೋರ್ವನ ನೇತೃತ್ವದಲ್ಲಿ ಫರ್ನಿಚರ್,ಟೇಬಲ್,ಕಂಪ್ಯೂಟರ್, ಸಿಸಿಟಿವಿ ಸಾಮಾಗ್ರಿ, ಪಾತ್ರೆ ಸಾಮಾಗ್ರಿ ಸಹಿತ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳನ್ನು ಯಾರಿಗೂ ಅರಿವಿಲ್ಲದೆ ಖಾಸಗೀ ವ್ಯಕ್ತಿಗಳಿಗೆ ರವಾನಿಸಲಾಗಿದ್ದು, ಪಂಚಾಯತಿನ ಹರಿತ ಕರ್ಮ ಸೇನೆಯ ವಾಹನ ಹಾಗೂ ಕರ್ನಾಟಕದ ಕೆಲವು ಪಿಕಪ್ ಗಳನ್ನು ಉಪಯೋಗಿಸಿ ಅಂತರಾಜ್ಯಕ್ಕೂ ಬೆಲೆ ಬಾಳುವ ವಸ್ತುಗಳನ್ನು ಮಾರಾಟಗೈಯಲಾಗಿದೆ. ಇದಲ್ಲದೆ ಕೆಲವು ವಸ್ತುಗಳನ್ನು ಉಪಾಧ್ಯಕ್ಷರ ಮನೆ ಸಮೀಪದ ವ್ಯಕ್ತಿಗೂ ತಲುಪಿಸಲಾಗಿದ್ದು ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಸಹಿತ ಯಾವುದೇ ಕ್ರಮಕೈಗೊಳ್ಳದಿದ್ದು ಆಡಳಿತ ಕೈಗೊಂಬೆಯಾದ ಪಂಚಾಯತ್ ಕಾರ್ಯದರ್ಶಿ, ಏಕಾಧಿಪತ್ಯದ ಉಪಾಧ್ಯಕ್ಷ ನಿಲುವು ರಾಜಿ ನೀಡಬೇಕೆಂದು ಆಗ್ರಹಿಸಿ ಎಡರಂಗ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ.

0 Comments