ಕುಂಬಳೆ : ಕಿದೂರು ಸಮೀಪದ ಆರ್ತಲ ಶ್ರೀಕೋಮಾರು ಚಾಮುಂಡಿ ಬೊಬ್ಬರ್ಯ ದೈವಸ್ಥಾನದ ಪುನರ್ ಪ್ರತಿಷ್ಠ ಬ್ರಹ್ಮಕಲಶ ಮತ್ತು ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹ ಪ್ರವೇಶವು ಏಪ್ರಿಲ್ 28ರಿಂದ 30ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಕುಟುಂಬದ ಯಜಮಾನ ಕೃಷ್ಣ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶಂಕರನಾರಾಯಣ ಮಯ್ಯ ಸಿರಿಬಾಗಿಲು
ಎಪ್ರಿಲ್ 29 ಬುಧವಾರ ಬೆಳಗ್ಗೆ ಗಂಟೆ 6ರಿಂದ ಗಣಪತಿ ಹವನ, ಬ್ರಹ್ಮಕಲಶ ಪೂಜೆ,ಬೆಳಗ್ಗೆ ಗಂಟೆ 9:50ರಿಂದ 11:25ರ ಮಧ್ಯೆ ನಡೆಯುವ ಮಿಥುನಲಗ್ನ ಶುಭಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ಹಾಗೂಶ್ರೀ ಕೋಮಾರು ಚಾಮುಂಡಿ, ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಗಳ ನಿರ್ಣಯ ಜರಗಲಿದೆ.ಬೆಳಗ್ಗೆ ಗಂಟೆ 11ರಿಂದಹರಿಸೇವೆ, ಪ್ರಸಾದ ವಿತರಣೆ,ಮಧ್ಯಾಹ್ನ ಗಂಟೆ 1:00ರಿಂದಅನ್ನಸಂತರ್ಪಣೆ,ಸಂಜೆ ಗಂಟೆ 5ರಿಂದಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ,ರಾತ್ರಿ ಗಂಟೆ 7ರಿಂದ ಗುಳಿಗ ದೈವದ ನೇಮೋತ್ಸವ,ರಾತ್ರಿ ಗಂಟೆ 8:30ಕ್ಕೆ ಭಂಡಾರ ಏರುವುದು,ರಾತ್ರಿ 9ರಿಂದ ಅನ್ನಸಂತರ್ಪಣೆ ಜರಗಲಿದೆ
ಏಪ್ರಿಲ್ 30ರಂದು ಬೆಳಗ್ಗೆ ಗಂಟೆ 8ಕ್ಕೆ ಎಣ್ಣೆ ಬೂಳ್ಯ,ಬೆಳಗ್ಗೆ ಗಂಟೆ 10:30ಕ್ಕೆ ಶ್ರೀ ಬೊಬ್ಬರ್ಯ ದೈವದ ನೇಮೋತ್ಸವ,ಬೆಳಗ್ಗೆ ಗಂಟೆ 11:30ಕ್ಕೆ ಧರ್ಮದೈವ ಶ್ರೀ ಕೋಮಾರು ಚಾಮುಂಡಿ ದೈವದ ನೇಮೋತ್ಸವ,ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ,ಮಧ್ಯಾಹ್ನ ಗಂಟೆ 2ರಿಂದ ಕೊರತ್ತಿ ದೈವದ ನೇಮೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

0 Comments