Ticker

6/recent/ticker-posts

Ad Code

ಇಂದು ನಲ್ಕ ನಂದಾದೀಪ ಸಂಘಟನೆಯ ಪಂಚ ಸಂಭ್ರಮ ಕಾರ್ಯಕ್ರಮ

 


ಪೆರ್ಲ: ನಲ್ಕದ ನಂದಾದೀಪ ಸಂಘಟನೆಯ ಪಂಚ ಸಂಭ್ರಮ ಮಾ.1ರಂದು ನಲ್ಕ ಶ್ರೀ ವಾಗ್ದೇವೀ ಸೇವಾ ಮಂದಿರ ಪರಿಸರದಲ್ಲಿ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಂಜೆ 4ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ರಾತ್ರಿ 7ಕ್ಕೆ ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಬೆಳ್ಳೂರು ಶಾಲಾ ಶಿಕ್ಷಕ ಕಮಲಾಕ್ಷ ನಾಯಕ್ ನಲ್ಕ ಕೇರಿಮೂಲೆ ಅಧ್ಯಕ್ಷತೆ ವಹಿಸುವರು. ದೈಗೋಳಿ ಸಾಯಿನಿಕೇತನ ಸೇವಾಶ್ರಮದ ಸ್ಥಾಪಕ ಡಾ.ಉದಯಶಂಕರ್ ನೂಜಿ, ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜೆ.ಎಸ್., ಅಮೃತದೀಪ ಪೆರ್ಲ ಸಂಚಾಲಕ ಉದಯ ಚೆಟ್ಟಿಯಾರ್ ಬಜಕೂಡ್ಲು, ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ವಿಠಲ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಣ್ಮಕಜೆ ಗ್ರಾಪಂ ಸದಸ್ಯ‌ ಜಗದೀಶ್ ಕುಲಾಲ್ ಖಂಡಿಗೆ, ಶಿವಾಜಿ ಫ್ರೆಂಡ್ಸ್ ಪೆರ್ಲ ಅಧ್ಯಕ್ಷ ಅಜಯ್ ಪೈ ಅಮೆಕ್ಕಳ, ನಂದಾದೀಪ ನಲ್ಕ ಅಧ್ಯಕ್ಷ ಹರಿಪ್ರಸಾದ್ ರೆಂಜೆಮೂಲೆ, ಅಜಿತ್ ಕುಮಾರ್ ನಲ್ಕ, ಅಶೋಕ್ ಕುಮಾರ್ ಅಭಿಕಟ್ಟೆ, ಉದಯ ಕುಮಾರ್ ಸ್ವರ್ಗ ಉಪಸ್ಥಿತರಿರುವರು. 9ಕ್ಕೆ ಭೋಜನ, 9.30ಕ್ಕೆ ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಚಂದ್ರಾವಳಿ ವಿಲಾಸ ಮಾಯಾ ಮಾರುತೇಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Post a Comment

0 Comments