Ticker

6/recent/ticker-posts

Ad Code

ವಾಣೀನಗರ ಸಾಲೆತ್ತಡ್ಕದಲ್ಲಿ ಭಾರಿ ಬೆಂಕಿ ಆಕಸ್ಮಿಕ : ಅಗ್ನಿ ಶಾಮಕ ದಳದ ಕಾರ್ಯಚರಣೆ


ಪೆರ್ಲ: ವಾಣೀನಗರ ಸಾಲೆತ್ತಡ್ಕದಲ್ಲಿ ಶನಿವಾರ ಸಂಜೆ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಶನಿವಾರ ಸಂಜೆ ವೇಳೆ‌ ಬೆಂಕಿ ಕಾಣಿಸಿದೆ. ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಉಡುಪಿ-ಕಾಸರಗೋಡು ಮತ್ತು ಕರಿಂದಳಂ-ವಯನಾಡು ನಡುವಿನ 400 ಕೆವಿ ವಿದ್ಯುತ್ ಲೈನ್‌ ಅಳವಡಿಕೆಗಾಗಿ ಕಡಿದು ಹಾಕಲಾದ ಕಾಡು ಮರಗಳು, ಅಡಕೆ ಮರಗಳು ಹೊತ್ತಿ ಉರಿದಿದೆ. ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ವ್ಯಾಪಿಸಿದ್ದಾಗಿ ಹೇಳಲಾಗುತ್ತಿದೆ. ಸಾಲೆತ್ತಡ್ಕದ ಕುಂಞಣ್ಣ ಮೂಲ್ಯ ಮತ್ತು ರಮೇಶ್ ಅವರ ಮನೆ ತನಕ ಬೆಂಕಿ ವ್ಯಾಪಿಸಿದೆ. ಸ್ಥಳೀಯರು ದೂರದಿಂದ ನೀರು ಹೊತ್ತು ತಂದು ಬೆಂಕಿ ನಂದಿಸಲು ಶ್ರಮಿಸಿದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ. ರಾತ್ರಿ 7ರ ವೇಳೆ ಅಗ್ನಿಶಾಮಕ ದಳದ ವಾಹನ ಆಗಮಿಸಿದರೂ ಇಕ್ಕಟ್ಟು ರಸ್ತೆಯಲ್ಲಿ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಸಾಲೆತ್ತಡ್ಕ ಪರಿಸರದಲ್ಲಿ ನಾಲ್ಕೈದು ಮನೆಗಳಿದ್ದು ಎಲ್ಲರೂ ಆತಂಕಗೊಂಡಿದ್ದಾರೆ.ಅಗ್ನಿ ಶಾಮಕ ದಳ ಹಾಗೂ ಊರವರು ಶಮನ ಕಾರ್ಯಚರಣೆ ನಡೆಸಿದರು.

Post a Comment

0 Comments