Ticker

6/recent/ticker-posts

Ad Code

ಬೆದ್ರಂಪಳ್ಳ ಬನ ಪಾಟ್ಲದಳ ರಸ್ತೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ : ನಾಗರಿಕರಿಂದ ತಡೆ

 

ಪೆರ್ಲ : ಎಣ್ಮಕಜೆ ಪಂಚಾಯತಿನ 16ನೇ ವಾರ್ಡಿನ ಬೆದ್ರಂಪಳ್ಳ ಬನ - ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಗುತ್ತಿಗೆದಾರನ ಅವ್ಯವಹಾರ ಆರೋಪಿಸಿ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ 2023-24ರ ರಾಜ್ಯ ಸರಕಾರದ ಬಜೆಟ್ ನಲ್ಲಿ  ಸುಮಾರು 70 ಲಕ್ಷ ರೂ ಯೋಜನೆ ಮೀಸಲಿರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಹಸೈನಾರ್ ಪೆರ್ಲ ಎಂಬವರ ಮಾಲಕತ್ವದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು.  

ಇದೀಗ ಕಳಪೆ ಮಟ್ಟದ ಡಾಮರು, ಜಲ್ಲಿ ಕಲ್ಲುಗಳನ್ನು ಉಪಯೋಗಿಸಿ ಯೋಜನೆಯಲ್ಲಿ ಸೂಚಿಸಿದ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸದಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಬ್ಲೋಕ್  ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ದೂರು ನೀಡಿದ್ದು ಅವರು ಸೋಮವಾರ ಸಂಜೆ ಸ್ಥಳ ಸಂದರ್ಶಿಸಿ ಪರಿಶೀಲನೆಗೈದು ಗುತ್ತಿಗೆದಾರನ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರದೇಶದ ಬಹು ಸಂಪರ್ಕ ರಸ್ತೆ ಇದಾಗಿದ್ದು ಈ ಹಿಂದೆ ಡಾಮರು ಎದ್ದು ಹೋಗಿ ಹೊಂಡ ಗುಂಡಿಗಳಾಗಿದ್ದ ರಸ್ತೆಗೆ ವಾರ್ಡ್ ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ ಅವರು ಮುತುವರ್ಜಿವಹಿಸಿ ಶಾಸಕರ ಮೂಲಕ ಯೋಜನೆ ಮಂಜೂರುಗೊಳಿಸಿ 2025 ಜೂನ್ ಜೂನ್ 23ರಂದು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲಾಗಿತ್ತು.

Post a Comment

1 Comments

  1. ಇವರ ಕೆಲಸವೇ ಹಾಗೆಯೆ.. ಮುಗಿಸಿದ ಮರುದಿನ ಎದ್ದು ಹೋಗುತ್ತದೆ. ದೂರು ನೀಡಿದವರ ಕಣ್ಣಿಗೆ ಮಣ್ಣುಹಾಕಲು ಅಧಿಕಾರಿಯರ ತನಿಖೆ ಅಷ್ಟೆ.
    ಉಪಯೋಗಿಸಿದ ಡಾಮಾರಿನ ಗ್ರೇಡ್ ಲ್ಯಾಬ್ ನಲ್ಲಿ ನೋಡಲು ಹೇಳಿ. ಇವರ್ ಯಾವಾಗಲೂ ಲಾಸ್ಟ್ ಗ್ರೇಡ್ ಡಾಮಾರು ತಂದು ಹಾಕುವುದು. ಕಪ್ಪು ಕಾಣುತ್ತದೆ. ಮತ್ತೆ ಹೋಗುತ್ತದೆ.
    ಗ್ರೇಡ್ ಗಳಲ್ಲಿ... ಏರ್ಪೋಟಿಗೆ ಹಾಕುವದ್ದು, ಹೈವೇಗೆ ಹಾಕುವದ್ದು, ಗ್ರಾಮೀಣ ರಸ್ತೆಗೆ ಹಾಕುವದ್ದು.....ಬೇರೆ ಬೇರೆ ಇದೆ. ಇದು ಯಾವುದೂ ಅಲ್ಲದ ವೇಷ್ಟ್ ಇಂತವರು ತಂದು ಹಾಕುತ್ತಾರೆ. ಜನರು ನೋಡುಗರಲ್ಲ; ಕಾವಲ್ಕಾರರು ಎಂದು ಈ ಅಧಿಕಾರಿ ವರ್ಗಕ್ಕೆ ಗೊತ್ತಾಗಬೇಕು.

    ReplyDelete