ಶಾರ್ಜಾ : ಶಾರ್ಜಾ ದುಬೈ ಬಾರ್ಡರ್ ಅನ್ಸಾರ್ ಮಾಲ್ ಬಳಿ ಭಾನುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಶಿರ್ತಾಡಿ ಮೂಲದ ಬಾಲಕಿಯೋರ್ವಳು ಮೃತಪಟ್ಟಿದ್ದಾಳೆ. ಶಿರ್ತಾಡಿಯ ದಿ. ಟಿ.ಆಲಿಯಬ್ಬ ಅವರ ಪುತ್ರ ಹಕೀಮ್ ಎಂಬವರ ಪುತ್ರಿ ಭಾತಿಮಾ ಅನಿಹಾ (5) ಈ ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ಹಕೀಮ್ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬ ಕೂಡಾ ಅಲ್ಲೇ ನೆಲೆಸಿದೆ. ಭಾನುವಾರ ಶಾಪಿಂಗ್ ಮುಗಿಸಿ ಹಿಂತಿರುಗಿ ಬಂದು ತಮ್ಮ ಕಾರನ್ನೇರುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆನ್ನಲಾಗಿದೆ. ಹಕೀಮ್ ಅವರಿಗೆ ಮೂವರು ಗಂಡು ಮಕ್ಕಳು, ಕೊನೆಯವಳು ಏಕಪುತ್ರಿ ಅನೀಹಾ. ಆಕೆಯ ಅಂತ್ಯಕ್ರಿಯೆ ದುಬೈಯಲ್ಲಿಯೇ ನಡೆಯಲಿದೆ ಎಂದು ತಿಳಿದು ಬಂದಿದೆ.

0 Comments