ತಿರುವನಂತಪುರ : ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಶಾಸಕರನ್ನು ರಾಜಧಾನಿಗೆ ಕರೆಸಲಾಗಿದ್ದು, ನಾಯಕರು ತಮ್ಮ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೆ.ಸಿ. ವೇಣುಗೋಪಾಲ್ 45 ಶಾಸಕರ ಬೆಂಬಲವನ್ನು ಹೊಂದಿದ್ದಾರೆಂದು ಹೇಳಿಕೊಂಡಿದ್ದು, ರಮೇಶ್ ಚೆನ್ನಿತ್ತಲ ಕೂಡ 25 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ವಿ.ಡಿ. ಸತೀಶನ್ 25 ಶಾಸಕರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಇಂದು ತಿರುವನಂತಪುರಕ್ಕೆ ಆಗಮಿಸಲಿದ್ದು, ವಿಧಾನಸಭಾ ಪಕ್ಷದ ಸಭೆಗೂ ಮುನ್ನ ಶಾಸಕರನ್ನು ಖುದ್ದಾಗಿ ಭೇಟಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.
ಮುಖ್ಯಮಂತ್ರಿ ಚುನಾವಣೆಯಲ್ಲಿ ಶಾಸಕರು ತಮ್ಮ ಅಭಿಪ್ರಾಯಗಳನ್ನು ರಹಸ್ಯವಾಗಿ ವ್ಯಕ್ತಪಡಿಸಲು ಅವಕಾಶ ಒದಗಿಸುವಂತೆ ವಿಡಿ ಸತೀಶನ್ ಹೈಕಮಾಂಡ್ ಅನ್ನು ಕೋರಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಷಿ ಅವರನ್ನು ತಾವು ನಂಬುವುದಿಲ್ಲ ಶಾಸಕರ ಅಭಿಪ್ರಾಯಗಳನ್ನು ಕೇಳುವಾಗ ದೀಪಾ ದಾಸ್ ಮುನ್ಷಿ ಹಾಜರಿರಬಾರದು ಎಂಬುದು ವಿ.ಡಿ ಬೇಡಿಕೆಯಾಗಿದೆ. ವಿಡಿ ಸತೀಶನ್ ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿಕೊಂಡಿದ್ದಾರೆ

0 Comments