Ticker

6/recent/ticker-posts

Ad Code

ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಚುನಾವಣಾ ಪ್ರಚಾರದ ಬೋರ್ಡ್‌ಗೆ ಪಟಾಕಿ ಇಟ್ಟು ಸ್ಫೋಟಿಸಿದ ದುಷ್ಕೃತ್ಯ : ಕೇಸು ದಾಖಲು


ಕುಂಬಳೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರದ ಬೋರ್ಡ್‌ಗೆ ಪಟಾಕಿ ಇಟ್ಟು ಸ್ಫೋಟಿಸಿ, ಅದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ಸ್ವಯಂಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನ 'ವೆಲ್ಯೇಟ್ಟನ್' ಎಂಬ ಖಾತೆಯ ಮಾಲೀಕನ ವಿರುದ್ಧ ಕುಂಬಳೆ ಪೊಲೀಸರು ಮೊಕದ್ದಮೆ ಹೂಡಿದ್ದಾರೆ. ಚುನಾವಣಾ ಬೋರ್ಡ್‌ನಲ್ಲಿ ವ್ಯಕ್ತಿತ್ವ ಹರಣ ಮಾಡುವಂತಹ ವಾಕ್ಯಗಳನ್ನು ಬರೆದ ನಂತರ, ಸೋಮವಾರ ರಾತ್ರಿ ಒಂದು ಗಂಟೆ ಮತ್ತು ಮಂಗಳವಾರ ಸಂಜೆ ಆರು ಗಂಟೆಯ ನಡುವಿನ ಅವಧಿಯಲ್ಲಿ ಪಟಾಕಿ ಹಚ್ಚಿ ಸ್ಫೋಟಿಸಲಾಗಿದೆ. ಈ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡಲಾಗಿತ್ತು ಎಂದು ಪೊಲೀಸರು ದಾಖಲಿಸಿರುವ ಎಫ್.ಐ.ಆರ್‌ನಲ್ಲಿ ತಿಳಿಸಲಾಗಿದೆ. ಜನರನ್ನು ಪ್ರಚೋದಿಸಿ ದಂಗೆ ಎಬ್ಬಿಸಲು ಪ್ರಯತ್ನಿಸಲಾಗಿದೆ ಎಂದು ಕೂಡ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Post a Comment

0 Comments