ಮಂಗಲ್ಪಾಡಿ : ಬಂದ್ಯೋಡು ಬಳಿಯ ಅಡ್ಕ ವೀರನಗರ ನಿವಾಸಿ, ಧರ್ಮತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಅಖಿಲೇಶ್ ಸದಾನಂದ ವೀರನಗರರವರು ಈ ಬಾರಿ ಅತ್ಯಧಿಕ ಅಂಕಗಳಿಂದ ಉತ್ತೀರ್ಣರಾಗಿದ್ದು, ಇವರನ್ನು ಹಿಂದೂ ಐಕ್ಯವೇದಿ ವೀರನಗರ ಸ್ಥಾನೀಯ ಸಮಿತಿ ವತಿಯಿಂದ ಮನೆಗೆ ತೆರಳಿ ಶಾಲು ಹೊದಿಸಿ, ಫಲಪುಷ್ಪವನ್ನಿತ್ತು ಸನ್ಮಾನಿಸಲಾಯಿತು.
ಈ ವೇಳೆ ಹಿಂದೂ ಐಕ್ಯವೇದಿಯ ಮಂಜೇಶ್ವರ ಮಂಡಲ ಸಂಚಾಲಕ ಗಿರಿ ವೀರನಗರ, ಸ್ಥಾನೀಯ ಸಮಿತಿ ರಕ್ಷಣಾಧಿಕಾರಿ ಮಣಿ ವೀರನಗರ, ಪ್ರೀತಂ ವೀರನಗರ, ಶೈಲೇಶ್ ವೀರನಗರ, ಯೋಗೀಶ್ ವೀರನಗರ, ಕಣ್ಣ ವೀರನಗರ, ಸ್ಥಾನೀಯ ಅಧ್ಯಕ್ಷ ಪ್ರೀತಂ ವೀರನಗರ ಉಪಸ್ಥಿತರಿದ್ದರು.

0 Comments