ಬೆಂಗಳೂರು : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟರಮಣಪ್ಪ (80) ನಿಧನರಾಗಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ತುಮಕೂರು ಪಾವಗಡ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೆಂಕಟರಮಣಪ್ಪ ನಾಲ್ಕು ಬಾರಿ ವಿಧಾನಸಭೆಗೆ ಬಂದು ಎರಡು ಬಾರಿ ಸಚಿವರಾಗಿದ್ದರು. 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಉಸ್ತುವಾರಿ ಸಚಿವರಾದರು. 2018 ಕಾಂಗ್ರೆಸ್-ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪುತ್ರರಾದ ಹಾಲಿ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಕುಮಾರಸ್ವಾಮಿ, ಪುತ್ರಿ ಪದ್ಮಾವತಿ ಅವರನ್ನು ಅಗಲಿದ್ದಾರೆ

0 Comments