ಕಾಸರಗೋಡು : ಮನೆಯಿಂದ ಹೊರಗೆ ಹೋಗಿದ್ದ ಯುವತಿಯೋರ್ವೆ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ. ಚೆರುವತ್ತೂರಿನ ತುರ್ತಿಯ ಪುದುವೈಪೆ ಮನೆಯ ಮೇಘಾ (23) ನಾಪತ್ತೆಯಾದ ಯುವತಿ.
ಮಂಗಳವಾರ ರಾತ್ರಿ 11.30 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಮೇಘಾ ಮನೆಯಿಂದ ಹೊರಗೆ ಹೋಗಿ ವಾಪಸ್ ಬಂದಿಲ್ಲ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಚಂದೇರಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

0 Comments