Ticker

6/recent/ticker-posts

Ad Code

ಹಾವು ಕಡಿತಕ್ಕೊಳಗಾಗಿ ಚಿಕಿತ್ಸೆಯ ನಡುವೆ ವೃದ್ಧೆ ಮೃತ್ಯು

ಕಾಸರಗೋಡು : ಮನೆಯ ಆವರಣದ ಪರಿಸರದಲ್ಲಿ ಹಾವು ಕಡಿತಕ್ಕೊಳಗಾದ ವೃದ್ಧೆಯೋರ್ವರು ಚಿಕಿತ್ಸೆ ಪಡೆಯುವ ನಡುವೆ  ಮೃತಪಟ್ಟಿದ್ದಾರೆ. ತಳಿಪರಂಬದ ಪಟ್ಟುವಂ ಕಾವುಂಗಲ್‌ನ ನಂಬರೋನ್ ನಾರಾಯಣಿ (77) ಮೃತ ಮಹಿಳೆ. 

ಅವರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಏಪ್ರಿಲ್ 26ರಂದು ತಮ್ಮ ಮನೆಯ ಆವರಣದಲ್ಲಿ ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದರು. ಹಾವಿನ ಮಾರಕ ವಿಷ ಇವರ ನರಮಂಡಲದ ಮೇಲೆ  ಬೀರಿದ ಪರಿಣಾಮವೇ ಸಾವಿಗೆ ಕಾರಣ ಎನ್ನಲಾಗಿದೆ. ಮೃತರು ಸಹೋದರರಾದ ಬಾಲನ್, ಗೋಪಾಲನ್ ಇವರನ್ನಗಲಿದ್ದಾರೆ. ಸಹೋದರಿ ಪಾರು ಹಿಂದೆಯೇ ಮೃತರಾಗಿದ್ದಾರೆ.

Post a Comment

0 Comments