Ticker

6/recent/ticker-posts

Ad Code

ಮೇ 14ಕ್ಕೆ ಎಣ್ಮಕಜೆ ಪಂಚಾಯತ್ ಮಟ್ಟದ ಮಳೆಗಾಲ ಪೂರ್ವ ಶುಚೀಕರಣ ಯಜ್ಞ


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ಮಳೆಗಾಲ ಪೂರ್ವ ಶುಚೀಕರಣ ಯಜ್ಞ ಮೇ 14 ಗುರುವಾರ ಬೆಳಗ್ಗೆ 8.30 ರಿಂದ ಚೆಕ್ ಪೋಸ್ಟ್‌ ಪರಿಸರದಲ್ಲಿ ನಡೆಯಲಿದೆ. ರೋಗ ಮುಕ್ತ ಸಮಾಜವನ್ನು ಸೃಷ್ಠಿಸುವ ಅಂಗವಾಗಿ ಪಂಚಾಯತು ಮಟ್ಟದ ಶುಚೀಕರಣ ಕಾರ್ಯಕ್ರಮ ಇದಾಗಿದೆ. 
ಪೆರ್ಲ ಚೆಕ್ ಪೋಸ್ಟ್, ಇಡಿಯಡ್ಕ, ಉಕ್ಕಿನಡ್ಕ ಮೊದಲಾದವು ಈ ಕಾರ್ಯಕ್ರಮದ ಕೇಂದ್ರಗಳಾಗಿದೆ. ಎಣ್ಮಕಜೆ ಪಂಚಾಯತು ಅಧ್ಯಕ್ಷೆ ಕುಸುಮಾವತಿ, ಉಪಾಧ್ಯಕ್ಷ . ಅಬೂಬಕ್ಕರ್ ಸಿದ್ದೀಕ್ ವಳಮುಗರ್‌, ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು ವ್ಯಾಪಾರಿ ವ್ಯವಸಾಯಿ ಪ್ರತಿನಿಧಿಗಳು, ಹರಿತ ಕರ್ಮ ಸೇನೆ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ವಯಂಸೇವಕರು ಮುಂತಾದವರು ಭಾಗವಹಿಲಿದ್ಧಾರೆ.

Post a Comment

0 Comments