ಪೆರ್ಲ: ಶನಿಜಯಂತಿಯ ಪುಣ್ಯಪರ್ವದ ಅಂಗವಾಗಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಘವೇಶ್ವರಭಾರತೀ ಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಬಜಕೂಡ್ಲು ಅಮೃತಧಾರ ಗೋಶಾಲೆಯಲ್ಲಿ ಶನಿವಾರ ಮುಂಜಾನೆ ಗುರು ವಂದನೆ, ದೇವತಾ ಪ್ರಾರ್ಥನೆಯೊಂದಿಗೆ ಶನಿ ನಮನ – ತಾಪ ಶಮನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ, ಶ್ರೀ ಮಹಾಗಣಪತ್ಯಥರ್ವಶೀರ್ಷ ಅಖಂಡ ಪಾರಾಯಣ, ಶ್ರೀಗೋಪಾಲಕೃಷ್ಣ ಪೂಜೆ, ಗೋಪೂಜೆ, ಗೋಸೇವೆ, ಶ್ರೀಮಹಾಗಣಪತಿಹವನ, ಪೂರ್ಣನವಗ್ರಹಶಾಂತಿ, ಶನಿಶಾಂತಿಹವನ, ಶ್ರೀಹನುಮತ್ಪಂಚರತ್ನಸ್ತೋತ್ರಪಾರಾಯಣ, ಗೋಗ್ರಾಸ ಸೇವೆ, ಗೋಪೂಜೆ, ಶನಿ ಕಲ್ಪೋಕ್ತ ಪೂಜೆ, ಶನಿ ಶಾಂತಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಶ್ರೀಗಣೇಶ ಪಂಚರತ್ನಸ್ತೋತ್ರ, ಸಂಜೆ ಶನಿ ಕಲ್ಲೋಕ್ತಪೂಜೆಯ ರಾತ್ರಿ ಮಹಾಮಂಗಳಾರತಿ ನೆರವೇರಿತು.
ಇಂದು ಬೆಳಗ್ಗೆ ಶ್ರೀ ಮಹಾಗಣಪತ್ಯಥರ್ವಶೀರ್ಷ ಅಖಂಡ ಪಾರಾಯಣ ಮಂಗಲ ಹಾಗೂ ಚತುದ್ರವ್ಯಾತ್ಮಕ ಶ್ರೀ ಮಹಾಗಣಪತ್ಯಥರ್ವಶೀರ್ಷ ಹವನ ನಡೆಯಿತು.


0 Comments