Ticker

6/recent/ticker-posts

ಕೊಂಡೆವೂರಿನಲ್ಲಿ ನಾಳೆ 22 ನೇ ಚಾತುರ್ಮಾಸ್ಯ ವ್ರತ ಸಂಕಲ್ಪ - 108 ದಿನಗಳ ಸಂಧ್ಯಾ ಭಜನೆಗೆ ಚಾಲನೆ

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳು ಜುಲೈ 10 ರ ಗುರುಪೂರ್ಣಿಮೆಯ ಶುಭದಿನದಂದು ತಮ್ಮ 22 ನೇ ಚಾತುರ್ಮಾಸ್ಯವ್ರತ ಸಂಕಲ್ಪವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಳ್ಳಲಿದ್ದಾರೆ. ಬಳಿಕ ಬೆಳಿಗ್ಗೆ 9.00ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ ವಿಶೇಷ ಸೀಯಾಳಭಿಷೇಕ, 10:30 ರಿಂದ ವ್ಯಾಸವಪೂಜೆ 12:30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಗಂಟೆ 5:00ಕ್ಕೆ ಈ ಸಮಯದಲ್ಲಿ ನಡೆಯಲಿರುವ 108 ದಿನಗಳ ಸಂಧ್ಯಾ ಭಜನೆಗೆ ಪರಮಪೂಜ್ಯ ಶ್ರೀಗಳು ಚಾಲನೆ ನೀಡಲಿದ್ದಾರೆ. ಸಂಜೆ 6:30ಕ್ಕೆ ಮಹಾಪೂಜೆಯ ನಂತರ ಶ್ರೀ ಗುರುಪಾದುಕಾಪೂಜೆ ನಡೆದು ಬಳಿಕ ಪೂಜ್ಯರು ಚಾತುರ್ಮಾಸ್ಯ ಸಂದೇಶ ನೀಡಿ ಭಕ್ತಾದಿಗಳಿಗೆ ಆಶೀರ್ಮಂತ್ರಾಕ್ಷತೆ ಅನುಗ್ರಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುಣ್ಯಭಾಜನರಾಗಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments