Ticker

6/recent/ticker-posts

ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಗುರುವಂದನಾ ಕಾರ್ಯಕ್ರಮ


 ಮಂಜೇಶ್ವರ : ದೇಶೀಯ ಅಧ್ಯಾಪಕ ಪರಿಷತ್ ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಗುರುವಂದನಾ ಕಾರ್ಯಕ್ರಮ ಕೊಮ್ಮೆ ತಿಮ್ಮಣ್ಣ ಭಟ್ ಇವರ ಸ್ವಗೃಹದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ವಹಿಸಿ ಶುಭಹಾರೈಸಿದರು.ಶ್ರೀ ಶಂಕರನಾರಾಯಣ ಎ.ಎಲ್. ಪಿ ಶಾಲೆ ಕೋಳ್ಳೂರಿನ ನಿವೃತ್ತ ಮುಖ್ಯಶಿಕ್ಷಕರಾದ ಕೊಮ್ಮೆ ತಿಮ್ಮಣ್ಣ ಭಟ್ ಇವರನ್ನು ಶಾಲು ಹೊದಿಸಿ ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್.ಎಸ್ ಎ.ಎಲ್.ಪಿ ಶಾಲೆ ಕೋಳೂರಿನ ನಿವೃತ್ತ ಮುಖ್ಯ ಶಿಕ್ಷಕರಾದ ಗೋಪಾಲ ಕೃಷ್ಣ ಭಟ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಕೋಳ್ಳೂರು ವಾರ್ಡ್ ಸದಸ್ಯರಾದ ನಾರಾಯಣ ತುಂಗಾ,ಎನ್ ಟಿ ಯು ರಾಜ್ಯ ಸಮಿತಿ ಸದಸ್ಯರಾದ ಅರವಿಂದಾಕ್ಷ ಭಂಡಾರಿ ಹಾಗೂ ಸನ್ಮಾನಿತರ ಸುಪುತ್ರ ಕಿಶೋರ್ ಭಟ್ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಜಿ.ಎಚ್.ಎಸ್ ಮೂಡಂಬೈಲ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಸುಬ್ಬಣ್ಣ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಎನ್ ಟಿ ಯು ರಾಜ್ಯ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಒಡಂಬೆಟ್ಟು ಸ್ವಾಗತಿಸಿ, ನಿರೂಪಿಸಿದರು.ಎನ್ ಟಿ ಯು ಜಿಲ್ಲಾ ಸದಸ್ಯರಾದ ಈಶ್ವರ್ ಕಿದೂರು ವಂದಿಸಿದರು.

Post a Comment

0 Comments