Ticker

6/recent/ticker-posts

ಜಿಲ್ಲಾ ಪಂಚಾಯತು ಡಿವಿಜನ್ ನಿಂದ ಎಡನೀರು ಎಂಬ ಹೆಸರು ಕೈಬಿಟ್ಟಿರುವುದು ಖಂಡನೀಯ- ಬಿಜೆಪಿ ಕೋಜಿಕ್ಕೋಡು ವಲಯ ಅಧ್ಯಕ್ಷ ಅಡ್ವ.ಕೆ.ಶ್ರೀಕಾಂತ್ ಹೇಳಿಕೆ


 ಜಿಲ್ಲಾ ಪಂಚಾಯತ್ ವಾರ್ಡಿನಲ್ಲಿ ಎಡನೀರು ಎಂಬ ಹೆಸರನ್ನು ಕೈಬಿಟ್ಟಿರುವುದು ಖಂಡನೀಯ ಎಂದು ಬಿಜೆಪಿ ಕೋಜಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ಅಡ್ವ.ಕೆ.ಶ್ರೀಕಾಂತ್ ಹೇಳಿದ್ದಾರೆ. ಇತಿಹಾಸ ಪ್ತಸಿದ್ದ ಎಡನೀರು ಮಠ ಇರುವ ವಾರ್ಡಿನ ಹೆಸರನ್ನು ಬದಲಾಯಿಸಿದ ರೀತಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದವರು ಹೇಳಿದರು. ಸಂವಿಧಾನದ ಮೂಲ ತತ್ವಗಳನ್ನು ಸಂರಕ್ಷಿಸುವಲ್ಲಿ ಎಡನೀರು ಮಠದ ಕೊಡುಗೆ ಅಪಾರ.

 ಧಾರ್ಮಿಕ, ಸಾಂಸ್ಕೃತಿಕ ಮಾತ್ರವಲ್ಲ ಜಗತ್ತಿನ ಕಾನೂನು ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳ ಸಂರಕ್ಷಣೆಯ ವಿಷಯದಲ್ಲಿ ಸಹ ಎಡನೀರು ಮಠ ಮುಂದೆ ಇದೆ. ಆ ರೀತಿಯ ಹೆಸರು ಕೈಬಿಟ್ಟಿರುವುದು ಖಂಡನೀಯವಾಗಿದೆ.

ಸಂವಿಧಾನವನ್ನು ಬುಡಮೇಲುಗೊಳಿಸುತ್ತಿದ್ದಾರೆ ಎಂದು ಕಿರುಚುವವರೇ ಎಡನೀರು ಎಂಬ ಹೆಸರನ್ನು ಕೈಬಿಟ್ಟಿದ್ದಾರೆ.ಇದನ್ನು ಪ್ರತಿಭಟಿಸಲೇ ಬೇಕಾಗಿದೆ ಎಂದವರು ಹೇಳಿದರು

Post a Comment

0 Comments