ಬದಿಯಡ್ಕ: ಪೈಕದಲ್ಲಿ ಮಸೀದಿ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಕಿಚ್ಚಿಟ್ಟು ನಾಶಗೊಳಿಸಿದ ಪ್ರಕರಣದಲ್ಲಿ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಮುನಿಯೂರು ನಿವಾಸಿ ಅಬೂಬಕರ್(51( ಬಂಧಿತ ಆರೋಪಿ.ಘಟನೆಯ ನಂತರ ಭೂಗತನಾಗಿದ್ದ ಆರೋಪಿಯನ್ನು ಮಲಪ್ಪುರದಿಂದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕಳೆದ ಗುರುವಾರ ಮುಂಜಾನೆ 2.30 ರ ವೇಳೆ ಪೈಕ ಜುಮಾ ಮಸೀದಿಯ ಕಂಪೌಂಡ್ ಬಳಿ ನಿಲ್ಲಿಸಿದ್ದ ಕಾರು ಹೊತ್ತಿ ಉರಿದಿತ್ತು. ಘಟನೆಯ ನಂತರ ಆರೋಪಿ ಬೈಕಿನಲ್ಲಿ ಕಾಞಂಗಾಡಿಗೆ ಹೋಗಿ ಅಲ್ಲಿಂದ ಮಲಪ್ಪುರಂಗೆ ಪರಾರಿಯಾಗಿದ್ದನು. ಸೈಬರ್ ಸೆಲ್ ಸಹಾಯದಿಂದಿಗೆ ಈತನ ಫೋನ್ ಇರುವ ಲೊಲೇಶನ್ ತಿಳಿದು ಆರೋಪಿಯ ಬಂಧನ ನಡೆದಿದೆ. ಎಸ್.ಐ.ಉಮೇಶ್, ಇತರ ಅಧಿಕಾರಿಗಳಾದ ಪ್ರಸಾದ್, ಆರೀಫ್, ಶ್ರೀನೇಶ್, ಶೈಜು ಎಂಬಿವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಆರೋಪಿ ಪೈಕ ಮಸೀದಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದನು. ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ಕಾರಣಕ್ಕಾಗಿ ಕಾರಿಗೆ ಕಿಚ್ಚಿಟ್ಟಿಬೇಕು ಎಂದು ಶಂಕಿಸಲಾಗಿದೆ.
0 Comments