ಕಾಸರಗೋಡು: ಸಾಮಾಜಿಕ ಆಂದೋಲನ, ಪರಿಷ್ಕಾರಗಳಿಗಾಗಿ ಮಹಾತ್ಮಾ ಅಯ್ಯಂಗಾಳಿಯವರು ನೀಡಿದ ಕೊಡುಗೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದೆಲ್ಲೆಡೆ ಪಸರಿಸಿದರು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ನಿನಿ ಎಂ.ಎಲ್ ಹೇಳಿದರು. ಎಸ್.ಸಿ.ಮೋರ್ಚಾ ಆಶ್ರಯದಲ್ಲಿ ನಡೆದ ಮಹಾತ್ಮಾ ಅಯ್ಯಂಗಾಳಿ ಜಯಂತಿಯನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು.
ಎಡ- ಬಲ ರಂಗಗಳು ಅಯ್ಯಂಗಾಳಿಯವರನ್ನು ಮರೆತರು. ಹಿಂದುಳಿದ ವಿಭಾಗಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಕಂಡಿರುವ ಕಾಂಗ್ರೆಸ್ ಸರಕಾರಗಳು, ಅವರ ಅಭಿವೃದ್ದಿಗಾಗಿ ಏನನ್ನೂ ಮಾಡಲಿಲ್ಲ ಎಂದವರು ದೂರಿದರು. ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ರಘು ಎಂ.ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಇತರರಾದ ಎ.ಕೆ.ಕಯ್ಯಾರ್, ಟಿ.ಡಿ.ಭರತನ್, ರಾಮಪ್ಪ ಮಂಜೇಶ್ವರ, ಸುರೇಶ್.ಬಿ.ಕೆ, ನಾರಾಯಣ ಪೆರಡಾಲ ಮೊದಲಾದವರು ಉಪಸ್ಥಿತರಿದ್ದರು
0 Comments