ಕಳತ್ತೂರು: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಓಣಂ ಆಚರಿಸಲಾಯಿತು.
ಪ್ರತಿ ತರಗತಿಯಲ್ಲೂ ಓಣಂ ಪೂಕಳಂ ರಂಗೇರಿತು. ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕಿಯರಿಂದ ನೃತ್ಯ , ಓಣಂ ಹಾಡು,ಕಿರು ನಾಟಕ ಪ್ರದರ್ಶನಗೊಂಡಿತು.
ಓಣಂ ಹಾಡಿನೊಂದಿಗೆ ಮಹಾಬಲಿಯನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿಟಿಎ ಅಧ್ಯಕ್ಷರಾದ ಶ್ರೀ ವಸಂತ ಚೂರಿತಡ್ಕ ನೆರವೇರಿಸಿದರು. ಪಿಟಿಎ ಉಪಾಧ್ಯಕ್ಷರಾದ ಸುರೇಶ್ ಕೆಮ್ಮಣ್ಣು,ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುಧಾ ಟೀಚರ್,ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಅಲ್ಲದೆ ರಕ್ಷಕರು,ಹಳೆ ವಿದ್ಯಾರ್ಥಿಗಳು,ಊರ ವಿದ್ಯಾಭಿಮಾನಿಗಳು, ಶಿಕ್ಷಕರು ,ವಿದ್ಯಾರ್ಥಿಗಳು ಪಾಲ್ಗೊಂಡರು.
ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ಆಚಾರ್ಯ ಸ್ವಾಗತಿಸಿ ,ಅಧ್ಯಾಪಕ ಕಾರ್ಯದರ್ಶಿ ಶ್ರೀ ಪುಷ್ಪರಾಜ ಶೆಟ್ಟಿ ವಂದಿಸಿದರು. ಅಧ್ಯಾಪಿಕೆಯರಾದ ಶ್ರೀಮತಿ ಸುಕೇಶಿನಿ,ಶ್ರೀಮತಿ ಸ್ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಎಲ್ಲರಿಗೂ ಓಣಂ ಔತಣಕೂಟವನ್ನೇರ್ಪಡಿಲಾಯಿತು.
0 Comments