ಕಾಸರಗೋಡು: ನಾಲ್ಕೂವರೆ ವರ್ಷ ಪ್ರಾಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 22 ವರ್ಷ ಕಠಿಣ ಸಜೆ 3 ಲಕ್ಷ ರೂ ದಂಡ ವಿಧಿಸಿ ನ್ಯಾಯಾಲಯ ತೀರಗಪು ನೀಡಿದೆ. ಕೊಲ್ಲಂ ಚಿತರ ನಿವಾಸಿ ಎಸ್.ರಾಜೀವನ್(55) ಎಂಬಾತನಿಗೆ ಕಾಸರಗೋಡು ಫಾಸ್ಟ್ ಅ್ರಾಕ್ ಪೋಕ್ಸೊ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 12 ತಿಂಗಳು ಅಧಿಕ ಶಿಕ್ಷೆ ಅನುಭವಿಸಬೇಕು.
2022 ಅಗಸ್ಟ್ 15 ರಂದಯ ನೀರ್ಚಾಲು ಬಳಿಯ ಮಾನ್ಯದಲ್ಲಿರುವ ಕ್ವಾಟರ್ಸಿನಲ್ಲಿ ಈ ಘಟನೆ ನಡೆದಿದೆ. ಮಾವಿನಹಣ್ಣು ಕೊಡುವೆನೆಂದು ಹೇಳಿ ಬಾಲಕಿಯನ್ನು ಕ್ವಾಟೆರ್ಸಿಗೆ ಕೊಂಡೊಯ್ದು ಕಿರುಕುಳ ನೀಡಿದ್ದನು. ಬದಿಯಡ್ಕ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು.

0 Comments