Ticker

6/recent/ticker-posts

Ad Code

ವಿವಿದ ಬೇಡಿಕೆ ಒತ್ತಾಯಿಸಿ ಸೆಕ್ರಟರಿಯೇಟ್ ನಲ್ಲಿ ಆರಂಭಿಸಿದ ಆಶಾ ಕಾರ್ಯಕರ್ತೆಯರ 266 ದಿನಗಳ ಸತ್ಯಾಗ್ರಹ ಅಂತ್ಯ



 ತಿರುವನಂತಪುರಂ: 266 ದಿನಗಳಿಂದ ಇಲ್ಲಿನ ಸೆಕ್ರಟರಿಯೇಟ್ ಮುಂದೆ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಸತ್ಯಾಗ್ರಹ ಕೊನೆಗೊಳಿಸಲಾಗಿದೆ. ರಾಜ್ಯ ಸರಕಾರವು ಆಶಾ ಕಾರ್ಯಕರ್ತರ ಗೌರವಧನ 1 ಸಾವಿರ ರೂ.ನಂತೆ ಹೆಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಂಡಿದೆ. ಆಶಾ ಕಾರ್ಯಕರ್ತೆಯರ ಗೌರವಧನ 21 ಸಾವಿರ ರೂ.ಆಗಿ ಹೆಚ್ಚಿಸಬೇಕು, ನಿವೃತ್ತಿ ವೇತನ 5 ಲಕ್ಷ ರೂ ಎಂದು ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ‌ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಹಗಲು ರಾತ್ರಿಯೆನ್ನದೆ ಸತ್ಯಾಗ್ರಹ ಆರಂಭಿಸಿದ್ದರು. ಇದೀಗ ನಿರಶನ ಕೊನೆಗೊಂಡರೂ ಹೋರಾಟ ಮುಂದುವರಿಯಲಿದೆಯೆಂದು ಹೋರಾಟದ ನೇತೃತ್ವ ವಹಿಸಿದ ಎಸ್.ಮಿನಿ ಹೇಳಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿ ಹೋರಾಟ ಮುಂದುವರಿಯಲಿದೆ ಎಂದವರು ಹೇಳಿದರು. ಮಹಾ ಪ್ರತಿಜ್ಞಾ ರಾಲಿಯೊಂದಿಗೆ ಸತ್ಯಾಗ್ರಹ ಅಂತ್ಯಗೊಂಡಿತು. ವಿರೋಧ ಪಕ್ಷ ನಾಯಕ ವಿ.ಡಿ.ಸತೀಶನ್, ನೇತಾರರಾದ ರಮೇಶ್ ಚೆನ್ನಿತ್ತಲ ಸಹಿತ ಹಲವರು ಭಾಗವಹಿಸಿದರು

Post a Comment

0 Comments