ಕಾಸರಗೋಡು: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 20 ವರ್ಷ (5 ವರ್ಷ ಕಠಿಣ ಸಜೆ ಸಹಿತ) ಸಜೆ, 16 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮುಳಿಯಾರು ಪೈಕ ರಸ್ತೆಯ ಕೆ.ನಿತ್ಯಾನಂದ(29) ನಡುವೆ ಗೆ ಹೊಸದುರ್ಗ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ದಂಡ ಪಾವತಿಸದಿದ್ದರೆ 8 ತಿಂಗಳು ಅಧಿಕ ಸಜೆ ಅನುಭವಿಸಬೇಕು.
2023 ಜುಲೈ 21ರಂದು ಪ್ರಕರಣಕ್ಕೆ ಸಂಬಂಧಪಟ್ಟ ಘಟನೆ ನಡೆದಿತ್ತು. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ 13 ವರ್ಷದ ಬಾಲಕಿಯನ್ನು ಜನವಾಸವಿಲ್ಲದ ಕಟ್ಟಡಕ್ಕೆ ಕೊಂಡೊಯ್ದು ಕಿರುಕುಳ ನೀಡಿದನೆನ್ನಲಾಗಿದೆ. ಅಂದು ಆದೂರು ಇನ್ಸ್ಪೆಕ್ಟರ್ ಆಗಿದ್ದ ಎ.ಅನಿಲ್ ಕುಮಾರ್ ಈ ಪ್ರಕರಣದ ತನಿಖೆ ನಡೆಸಿದ್ದರು.

0 Comments