ಪತ್ತನಂತಿಟ್ಟ: ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ಚಿನ್ನ ಕದ್ದೊಯ್ದ ಪ್ರಕರಣದಲ್ಲಿ ತಿರುವಿದಾಂಕೂರು ದೇವಸ್ವಂ ಬೋರ್ಡ್ ಮಾಜಿ ಎಕ್ಸಿಕ್ಯುಟಿವ್ ಆಫೀಸರನ್ನು ಬಂಧಿಸಲಾಗಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್.ಐ.ಟಿ) ದೇವಸ್ವಂ ಬೋರ್ಡಿನ ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಸುಧೀಶ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖೈ 3 ಕ್ಕೇರಿದೆ.
ಈ ಮೊದಲು ಉದ್ಯಮಿ ಉಣ್ಣಿಕೃಷ್ಣನ್ ಪೋಟ್ಟಿ, ದೇವಸ್ವಂ ಅಧಿಕಾರಿ ಮುರಾರಿ ಬಾಬು ಎಂಬಿವರನ್ನು ಬಂಧಿಸಲಾಗಿತ್ತು.
ಇದೀಗ ಬಂಧಿತನಾದ ಸುಧೀಶ್ ಕುಮಾರ್ ಶಬರಿಮಲೆಯ ದಾಖಲೆಗಳಲ್ಲಿ ತಪ್ಪು ಮಾಹಿತಿ ಬರೆದಿದ್ದನೆಂದು ತಿಳಿದು ಬಂದಿದೆ. ಗರ್ಭಗುಡಿಯ ಮುಂಭಾಗದ ದ್ವಾರಪಾಲಕ ಶಿಲ್ಪಕ್ಕೆ ಚಿನ್ನದ ಲೇಪವಿದ್ದರೂ ಅದು "ತಾಮ್ಯ" ಎಂದು ಸುಧೀಶ್ ಕುಮಾರ್ ದಾಖಲೆಗಳಲ್ಲಿ ನಮೂದಿಸಿದ್ದನು. ಇದು ಚಿನ್ನ ಕಳವು ತಂಡಕ್ಕೆ ವರದಾನವಾಯಿತು ಎಂದು ಹೇಳಲಾಗುತ್ತಿದೆ

0 Comments