ಕಾಸರಗೋಡು : ವಯೋವೃದ್ಧರೋರ್ವರು ಅರಿವಿಲ್ಲದೆ ಅಳವಾದ ಬಾವಿಗೆ ಆಕಸ್ಮಾತ್ ಅಡಿ ತಪ್ಪಿ ಬಿದ್ದಿದ್ದು ತಕ್ಷಣ ರಕ್ಷಣೆಗೆ ಇಳಿದ ಯುವಕನೋರ್ವನ ಸಹಿತ ಮೇಲೆ ಬರಲಾಗದೆ ಗಂಟೆಗಳಷ್ಟು ಕಾಲ ಬಾವಿಯೊಳಗೆ ಉಳಿದಿದ್ದು ಕಾಸರಗೋಡು ಅಗ್ನಿಶಾಮಕ ದಳ ಬಂದು ಇಬ್ಬರನ್ನು ರಕ್ಷಿಸಿದ ಘಟನೆ ತಳಂಗರೆ ಪಳ್ಳಿಕಾಲ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಇಲ್ಲಿನ ಅಬ್ದುಲ್ ರಹಿಮಾನ್ ಎಂಬವರ ಬಾವಿಗೆ ನೆಲ್ಲಿಕುನ್ನು ನಿವಾಸಿಯಾದ ಟಿ.ಎಂ.ಮುನೀರ್ (74) ಆಕಸ್ಮಿಕವಾಗಿ ಬಿದ್ದಿದ್ದು ತಕ್ಷಣ ಜನ ಸೇರಿ ರಕ್ಷಣೆಗೆ ಮೊರೆ ಇಟ್ಟಾಗ ಉತ್ತರ ಪ್ರದೇಶ ನಿವಾಸಿಯಾದ ಲುಕ್ ಮಾನ್ ಎಂಬ ಯುವಕ ರಕ್ಷಣೆಗಾಗಿ ಬಾವಿಗಿಳಿದಿದ್ದ. 15 ಅಡಿ ಆಳವು 10 ಅಡಿ ನೀರಿದ್ದ ಬಾವಿಯಿಂದ ಮೇಲೆ ಬರಲಾಗದೆ ಚಡಪಡಿಸಿದ್ದು ಈ ವೇಳೆ ರಕ್ಷಣೆಗೆ ಬಂದ ಅಗ್ನಿಶಾಮಕ ದಳ ಬಾವಿಯೊಳಗಿದ್ದ ವೃದ್ಧ ಸಹಿತ ಯುವಕನನ್ನು ರಕ್ಷಿಸಿತ್ತು. ಸ್ಟೇಶನ್ ಆಫೀಸರ್ ಆರ್ ವಿನೋದ್ ಕುಮಾರ್, ಸಿನೀಯರ್ ಫಯರ್ ರೆಸ್ಕೂಸ್ ಅಧಿಕಾರಿ ವಿ.ಎನ್ ವೇಣುಗೋಪಾಲ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿತ್ತು.

0 Comments