ಬೋವಿಕ್ಕಾನ : ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಹಾಯಕ ಅರ್ಚಕರಾಗಿ ದುಡಿಯುತ್ತಿದ್ದ ವಿಟ್ಲ ನಿವಾಸಿ ಬಿ. ಅನಂತಕೃಷ್ಣ ಭಟ್ಟರ ಮೃತದೇಹ ಕ್ಷೇತ್ರ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. 27ವರ್ಷಗಳ ಹಿಂದೆ ಮಲ್ಲದಲ್ಲಿ ಉದ್ಯೋಗಕ್ಕೆ ಸೇರಿದ್ದ ಇವರು ಆದಿತ್ಯವಾರ ಅಪರಾಹ್ನದ ಬಳಿಕ ನಾಪತ್ತೆಯಾಗಿದ್ದರು. ಅವರ ವಾಸಸ್ಥಳದಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ದೇವಳದ ಸಿಸಿಟಿವಿ ಮೂಲಕ ಶೋಧಿಸಿದಾಗ ನಡೆದುಕೊಂಡು ಹೋಗುವುದು ಕಂಡುಬಂದಿತ್ತು. ಇದೇ ದಾರಿಯಲ್ಲಿ ತೆರಳಿ ಶೋಧಿಸಿದಾಗ ತೋಡಿನಲ್ಲಿ ಶವ ಪತ್ತೆಯಾಗಿದೆ. ತೋಡಿಗೆ ತಡೆಗೋಡೆ ಕಟ್ಟಿ ಕೃಷಿ ಅಗತ್ಯಕ್ಕೆ ನೀರು ಸಂಗ್ರಹಿಸಿರಿಸಲಾಗಿತ್ತು ಅದರಲ್ಲಿ ಮೃತದೇಹ ಕಂಡುಬಂತು. ಬಳಿಕ ಕಾಸರಗೋಡು ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹ ಮೇಲಕ್ಕೆತ್ತಿದರು. ಇವರು ವೆಂಕಟ್ರಮಣ ಭಟ್ -ಕಲಾವತಿ ದಂಪತಿಗಳ ಮಗನಾಗಿದ್ದು, ಅವಿವಾಹಿತರಾಗಿದ್ದಾರೆ.

1 Comments
😥😥ಓಂ ಶಾಂತಿ:
ReplyDelete