Ticker

6/recent/ticker-posts

Ad Code

ಇಂದಿನಿಂದ ಸಾಂತಪದವು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

 

ಪೆರ್ಲ : ಅಡ್ಯನಡ್ಕ ಸಮೀಪದ ಸಾಂತಪದವು ಶ್ರೀ ರಾಜಂದೈವ ಪಂಜುರ್ಲಿ, ಧೂಮಾವತಿ ಶ್ರೀ ಆದಿ ಕೊರಗಚನಿಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.20ರಿಂದ ಮಾ.22ರ ವರೆಗೆ ನಡೆಯಲಿದೆ. ಮಾ.20ರಂದು ಬೆಳಗ್ಗೆ 9ಕ್ಕೆ ಭಂಡಾರಕ್ಕೆ ಶುದ್ಧ ಕಲಶ, ಸಂಜೆ 6ರಿಂದ ಶ್ರೀದೈವಗಳಿಗೆ ತಂಬಿಲ, ಪುದತ್ತ ಕೋಲ, ರಾತ್ರಿ 8.30ರಿಂದ ಪ್ರಸಾದ ಭೋಜನ, ಮಾ.21ರಂದು ಬೆಳಗ್ಗೆ 7.30ರಿಂದ ಧೂಮಾವತಿ ದೈವದ ನೃತ್ತ ಸೇವೆ, 10ರಿಂದ ರಾಜಂದೈವ ಪಂಜುರ್ಲಿ ದೈವದ ನೃತ್ತ ಸೇವೆ, ಮಧ್ಯಾಹ್ನ 1ರಿಂದ ಪಡ್ಡೈ ಧೂಮಾವತಿಯ ನೃತ್ತ ಸೇವೆ, ಪ್ರಸಾದ ಭೋಜನ, ಸಂಜೆ 3ರಿಂದ ಕೊರಗಚನಿಯ ದೈವದ ಕಾಲಾವಧಿ ನೃತ್ತ ಸೇವೆ (ಪುದ್ವಾರ್ ಸಂಮ್ಮಾನ), ಭಂಡಾರದ ಕೋಲ ಸೇವೆ, 22ರಂದು ಬೆಳಗ್ಗೆ 8ರಿಂದ ಕೊರಗಚನಿಯ ದೈವದ ವಿಶೇಷ ಹರಕೆ ಕೋಲಗಳು, ಮಧ್ಯಾಹ್ನ 1ರಿಂದ ಪ್ರಸಾದ ಭೋಜನ, ವಿಶೇಷ ಹರಕೆ ಕೋಲಗಳು ನಡೆಯಲಿವೆ.

Post a Comment

0 Comments