Ticker

6/recent/ticker-posts

Ad Code

ಉದ್ಯಾವರ ಗುತ್ತು ಅಂಗನವಾಡಿ ಕಾರ್ಯಕರ್ತೆಯ ನಿವೃತ್ತಿ ಜೀವನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ

 

ಮಂಜೇಶ್ವರ :   ಉದ್ಯಾವರ ಗುತ್ತು ಅಂಗನವಾಡಿ ಶಾಲೆಯಲ್ಲಿ ಕಾರ್ಯಕರ್ತೆಯಾಗಿ ನಿವೃತ್ತರಾದ ಯಶೋಧಾ ಟೀಚರ್ ಅವರಿಗೆ ಕೇಂದ್ರದ ಮಕ್ಕಳ ಪೋಷಕರು ಹಾಗೂ ಸ್ಥಳೀಯ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು. 

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮಂಜೇಶ್ವರ‌ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ಔರಾ ಅವರು, 'ಯಶೋಧಾ ಟೀಚರ್ ಅವರ ಸೇವಾ ಬದ್ದತೆ ಇತರರಿಗೆ ಮಾದರಿಯಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 'ಸರಕಾರದ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವಲ್ಲಿ ಹಾಗೂ ಅಂಗನವಾಡಿಗೆ ಆಗಮಿಸುವ ಪುಟಾಣಿಗಳ ಕಾಳಜಿ ಮಾಡುವಲ್ಲಿ  ಯಶೋಧಾ ಟೀಚರ್ ಅವರಿಗೆ ವಿಶೇಷ ಶ್ರದ್ಧೆ, ಆಸಕ್ತಿ, ಪ್ರಾಮಾಣಿಕತೆ ಇತ್ತು' ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಸಮಗ್ರ ಶಿಶು ಅಭಿವೃದ್ಧಿ ಸೇವೆ ಯೋಜನೆ (ಐಸಿಡಿಎಸ್) ಮೇಲ್ವಿಚಾರಕಿ ಸುಮತಿ ಅವರು ಮಾತನಾಡಿ, 'ಓರ್ವ ಜನಾನುರಾಗಿ ಅಂಗನವಾಡಿ ಕಾರ್ಯಕರ್ತೆಯನ್ನು  ಊರಿನ ಜನರು ಯೋಗ್ಯ ರೀತಿಯಲ್ಲಿ ಬೀಳ್ಕೊಡುತ್ತಿರುವುದು ಒಂದು ಆರೋಗ್ಯಕರ ಸಮಾಜದ ಲಕ್ಷಣವಾಗಿದೆ' ಎಂದು ಹರ್ಷ ವ್ಯಕ್ತಪಡಿಸಿದರು. ಸ್ಥಳೀಯ ಮುಖಂಡರಾದ ನೈನಾರ್ ಅಹಮ್ಮದ್ , ನಾರಾಯಣ ನಾಯ್ಕ್, ನಾರಾಯಣನ್, ರವಿಚಂದ್ರ, ಸುಲೋಚನಾ ಮುಂತಾದವರು ಶುಭಾಶಂಸನೆಗೈದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಸೀತಾ ಸ್ವಾಗತಿಸಿ, ರವಿಚಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments