ಬದಿಯಡ್ಕ : ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿ, ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾಗಿದ್ದ ಸುಬ್ಬಣ್ಣ ಆಳ್ವ ಅವರು ಆಕಸ್ಮಿಕವಾಗಿ ನಿಧನರಾಗಿರುವ ಹಿನ್ನೆಲೆಯಲ್ಲಿ, ಅವರ ಧರ್ಮಪತ್ನಿ ವಸಂತಿ ಆಳ್ವ ಅವರಿಗೆ ರೂ. 50,000/- ಸಹಾಯಧನದ ಚೆಕ್ ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆ ಅವರು ಮೃತರ ಪುತ್ರ ಮನೋಜ್ ಆಳ್ವ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬದಿಯಡ್ಕ ಪ್ರಾಂತೀಯ ವ್ಯವಸ್ಥಾಪಕ ಚಂದ್ರ ಎಂ ಹಾಗೂ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ಶ್ಯಾಂ ಪ್ರಶಾಂತ ಬಿ ಉಪಸ್ಥಿತರಿದ್ದರು.

0 Comments