Ticker

6/recent/ticker-posts

Ad Code

ಪೈಟಿಂಗ್ ಕಾರ್ಮಿಕನಿಗೆ ಬಿಸಿಲಾಘಾತ : ಸುಟ್ಟ ಗಾಯ

 

ಕಾಞಂಗಾಡು : ಬಿಸಿಲಿನ ಬೇಗೆಯ ಪರಿಣಾಮವಾಗಿ ಪೇಂಟಿಂಗ್ ಕೆಲಸಗಾರನೊಬ್ಬ ಗಂಭೀರ ಸುಟ್ಟ ಗಾಯಗೊಂಡ ಘಟನೆ ವರದಿಯಾಗಿದೆ. ಅತಿಯಂಪುರದ ರತೀಶ್ (45) ಬಿಸಿಲಿನ ಬೇಗೆಗೆ ತುತ್ತಾದ ಪೈಟಿಂಗ್ ಕಾರ್ಮಿಕ.  ಅತಿಯಂಪುರದಲ್ಲಿ ಪೈಟಿಂಗ್ ಬಳಿಯುತ್ತಿದ್ದಾಗ ಈ ಘಟನೆ ನಡೆದಿದೆ. ರತೀಶ್ ಅವರ ದೇಹದ ಹಿಂಭಾಗದಲ್ಲಿ ಗಂಭೀರ ಸುಟ್ಟ ಗಾಯಗಳಾಗಿವೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಿಸಿಲಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಾಂಞಂಗಾಡ್ ಪುರಸಭೆ ಕೌನ್ಸಿಲರ್ ಉಣ್ಣಿಕೃಷ್ಣನ್ ಮತ್ತು ಇನ್ನು ಕೆಲವರು ಈ ಭಾಗದಲ್ಲಿ ಬಿಸಿಲ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು.

Post a Comment

0 Comments