Ticker

6/recent/ticker-posts

Ad Code

ಮಹಿಳಾ ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ರಹಸ್ಯ ಕ್ಯಾಮರಾ ಇರಿಸಿದ ಪೋಲೀಸನ ಬಂಧನ


 ಮಹಿಳಾ ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ರಹಸ್ಯ ಕ್ಯಾಮರಾ ಇರಿಸಿದ ಪೋಲೀಸನನ್ನು ಬಂಧಿಸಲಾಗಿದೆ. ಇಡುಕ್ಕಿ ವಂಡಿಪೆರಿಯಾರ್ ಪೋಲೀಸ್ ಠಾಣೆಯ ವೈಶಾಖ್ ಬಂಧನಕ್ಕೀಡಾದ ಪೊಲೀಸ್ ಅಧಿಕಾರಿ. ವಂಡಿಪೆರಿಯಾರ್ ಪೊಲೀಸ್ ಠಾಣೆಗೆ ಹೊಂದಿಕೊಂಡು ಮಹಿಳಾ ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆ ಇದೆ. ಈ ಕೋಣೆಯಲ್ಲಿ ವೈಶಾಖ್ ರಹಸ್ಯ ಕ್ಯಾಮರಾ ಇರಿಸಿದನೆನ್ನಲಾಗಿದೆ. ಕ್ಯಾಮರಾದಲ್ಲಿ ಮಹಿಳಾ ಪೊಲೀಸರು ಬಟ್ಟೆ ಬದಲಾಯಿಸುವ ದೃಶ್ಯ ಚಿತ್ರೀಕರಣವಾಗಿದ್ದು, ಈ ದೃಶ್ಯಗಳನ್ನು ವೈಶಾಖ್ ಇತರ ಪೊಲೀಸರಿಗೆ ಹಂಚಿದ್ದನು. ಮಹಿಳಾ ಪೊಲೀಸರು ನೀಡಿದ ದೂರಿನಂತೆ  ಕೇಸು ದಾಖಲಿಸಿರುವ ಹಿರಿಯ ಅಧಿಕಾರಿಗಳು ಇದೀಗ ವೈಶಾಖ್ ನನ್ನು ಬಂಧಿಸಿದ್ದಾರೆ‌

Post a Comment

0 Comments