Ticker

6/recent/ticker-posts

45ನೇ ವರ್ಷದ ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


 ಮಂಜೇಶ್ವರ: 45 ನೇ ವರ್ಷದ ಮಂಜೇಶ್ವರ  ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ  ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಂಜೇಶ್ವರ ಸರ್ವಿಸ್ ಕೊ-ಓಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಸಿ. ಎಚ್ ಗಣೇಶ್ ಅವರು ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಹೈಮೇಶ್ ಬಿ.ಎಂ, ಅಧ್ಯಕ್ಷರಾದ  ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿ ನವೀನ್ ಅಡಪ್ಪ, ಪ್ರಧಾನ ಸಂಚಾಲಕರಾದ ನ್ಯಾ/ನವೀನ್ ರಾಜ್ ( ಕ್ಷೇತ್ರದ ಅಧ್ಯಕ್ಷರು ), ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಗೌರವ ಸಲಹೆಗಾರರಾದ ದಿನಕರ್ ಬಿ.ಎಂ, ದೇವರಾಜ್ ಎಂ. ಎಸ್, ಹಾಗೂ ಉಪಾಧ್ಯಕ್ಷರಾದ ಶಿವಪ್ರಸಾದ್ ಪೆಲಪ್ಪಾಡಿ, ಚಂದ್ರಹಾಸ ಪೆಲಪ್ಪಾಡಿ, ಕೃಷ್ಣಪ್ಪ ಪೂಜಾರಿ,ರಮೇಶ್ ಬಿ.ಎಂ,ಸುರೇಶ್ ಗಾಣಿoಜಾಲ್, ಸುನಿಲ್ ಕುಮಾರ್ ಹೊಸಂಗಡಿ, ಕಮಲಾಕ್ಷ ತೂಮಿನಾಡು,  ರತನ್ ಹೊಸಂಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಕ್ಲಾಬ್ ನ ಸದಸ್ಯರು ಜೊತೆಗಿದ್ದರು.

Post a Comment

0 Comments