ಕಾಸರಗೋಡು: ಜನರಲ್ ಆಸ್ಪತ್ರೆ ಕಾಸರಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ (ಟಿ ಬಿ) ಕ್ಷಯ ರೋಗ ವಾರ್ಡಿನ ಶೋಚನೀಯ ಅವಸ್ಥೆಯನ್ನು ಪರಿಹರಿಸಬೇಕಾಗಿ ಯೂತ್ ಕಾಂಗ್ರೆಸ್' ಕಾಸರಗೋಡು ನಿಯೋಜಕ ಮಂಡಲ ವತಿಯಿಂದ ನಿವೇದನೆಯನ್ನು ಸಲ್ಲಿಸಲಾಯಿತು.
ಪ್ಲಾಸ್ಟಿಕ್ ಹೊದೆಸಿರುವ ಕಟ್ಟಡದಲ್ಲಿ ಇದೀಗ ಟಿಬಿ ಸೆಂಟರ್ ಕಾರ್ಯಾಚರಿಸುತ್ತಿದ್ದು ಮಳೆಗಾಲದಲ್ಲಿ ಮುರಿದು ಬೀಳುವ ಸಾಧ್ಯತೆ ಇದ್ದು ಇದು ರೋಗಿಗಳಿಗೆ ಹಾಗೂ ಆರೋಗ್ಯ ಪ್ರವರ್ತಕರಿಗೆ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇದ್ದು ಆದಷ್ಟು ಬೇಗ ಸುಸ್ತಿರವಾದ ಕಟ್ಟಡದಲ್ಲಿ ಕಾರ್ಯಚರಿಸುವಂತೆ ಮಾಡಬೇಕಾಗಿ ಆಸ್ಪತ್ರೆ ಸುಪರಿಡೆಂಟ್ ಅವರಿಗೆ ಯೂತ್ ಕಾಂಗ್ರೆಸ್ ಕಾಸರಗೋಡು ನಿಯೋಜಕ ಮಂಡಲ ಅಧ್ಯಕ್ಷ ಆಬಿದ್ ಎಡಚೇರಿ ಅರ್ಜಿಯನ್ನು ಸಲ್ಲಿಸಿ ಮನವಿ ಮಾಡಿದರು.. ಯೂತ್ ಕಾಂಗ್ರೆಸ್ ಕಾಸರಗೋಡು ನಿಯೋಜಕ ಮಂಡಲ ಸದಸ್ಯರಾದ ಶಂಶುದ್ದೀನ್ ಕುಂಬಡಾಜೆ, ನರಸಿಂಹ ಚೇರೂರು, ಸಲೀಂ ಪಟ್ಲ, ಪ್ರಶಾಂತ್ ಎದಿರ್ತೋಡ್, ಮನಾಫ್ ಮಧೂರು, ಅನ್ಸಾರಿ ಕೋಟೆಕುನ್ನ್ ಉಪಸ್ಥಿತರಿದ್ದರು.
0 Comments