Ticker

6/recent/ticker-posts

123 ಕಿಲೊ ಗಾಂಜಾದೊಂದಿಗೆ ದೇಲಂಪಾಡಿಯ ಮುಸ್ಲಿಂ ಲೀಗ್ ನೇತಾರ ಸಹಿತ ಮೂರು ಮಂದಿಯ ಸೆರೆ


 ಮಂಗಳೂರು: 123 ಕಿಲೊ ಗಾಂಜಾದೊಂದಿಗೆ ದೇಲಂಪಾಡಿಯ ಮುಸ್ಲಿಂ ಲೀಗ್ ನೇತಾರ ಸಹಿತ ಮೂರು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಗಾಂಜಾ ಸಾಗಿಸಲು ಬಳಸಿದ ಕಾರುಗಳು, ಮೊಬೈಲು ಫೋನು, ನಗದು ಹಣ ಎಂಬಿವುಗಳನ್ನು ವಶಪಡಿಸಲಾಗಿದೆ. ದೇಲಂಪಾಡಿ ಪಂಚಾಯತು ಮುಸ್ಲಿಂ ಲೀಗ್ ಮುಖಂಡ ಮಸೂದ್(45) ಈತನ ಗೆಳೆಯರಾದ ಮುಹಮ್ಮದ್ ಆಶಿಕ್(24), ಸುಬೈರ್(30) ಬಂಧಿತರು. ವಶಪಡಿಸಿದ ಗಾಂಜಾದ ಬೆಲೆ 45 ಲಕ್ಷ ರೂ ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 ಪ್ರಸ್ತುತ ಪ್ರಕರಣವು ದೇಲಂಪಾಡಿ ಪಂಚಾಯತು ಸಹಿತ ವಿವಿದೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮೂಡುಬಿದಿರೆ ತಾಲೂಕಿನ ಬೆಳುವಾಯಿ ಕಾಂತಾವರ ಕ್ರಾಸ್, ಮತ್ತಡೆಕ್ಕರೆ ಎಂಬ ಸ್ಥಳದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರೋಪಿಗಳ ಮನೆಗಳಿಗೆ ಪೊಲೀಸರು ದಾಳಿ‌ ನಡೆಸಿದರು.

Post a Comment

0 Comments