Ticker

6/recent/ticker-posts

ನಾಳೆ ಮುಂಡಿತ್ತಡ್ಕ -ಕನ್ಯಪ್ಪಾಡಿ ರಸ್ತೆ ಶೋಚನೀಯಾಸ್ಥೆ ಖಂಡಿಸಿ ಯೂತ್ ಕಾಂಗ್ರೆಸ್ಪ್ರ ನಿಂದ ಪ್ರತಿಭಟನೆ

 


ಬದಿಯಡ್ಕ : ನೂರಾರು ವಿದ್ಯಾರ್ಥಿಗಳು ಮತ್ತು ರೋಗಿಗಳು,ಸಾರ್ವಜನಿಕರು  ಬಳಸುವ  ಮುಂಡಿತಡ್ಕ-ಕನ್ಯಪ್ಪಾಡಿ  ರಸ್ತೆಯ ಶೋಚನೀಯಾಸ್ಥೆಯನ್ನು ಖಂಡಿಸಿ  ಆ.3ಕ್ಕೆ ಬೆಳಗ್ಗೆ 11 ಗಂಟೆಗೆ ಯೂತ್ ಕಾಂಗ್ರೆಸ್ ಎಣ್ಮಕಜೆ -ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಪಂಚಾಯತ್ ಆಡಳಿತಕ್ಕೊಳಪಟ್ಟ ಈ ರಸ್ತೆಯನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದ್ದು ಈ ಬಗ್ಗೆ ಹಮ್ಮಿಕೊಂಡ ಪ್ರತಿಭಟನೆಯನ್ನು ಡಿಸಿಸಿ ಪ್ರಧಾನ‌ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್.ಉದ್ಘಾಟಿಸುವರು. 

ಕಾಸರಗೋಡು ಬಿ.ಸಿ. ರೋಡಿನಿಂದ ಆರಂಭಿಸಿ ಮುಂಡಿತಡ್ಕ ವರೆಗಿನ ಈ ರಸ್ತೆಯ ಬಗ್ಗೆ ಮುಸ್ಲಿಂ ಲೀಗ್ ಮಂಜೇಶ್ವರ ಅಸೆಂಬ್ಲಿ ಕ್ಷೇತ್ರದ ಜಂಟಿ ಕಾರ್ಯದರ್ಶಿ ಸಿದ್ದೀಕ್ ವಳಮುಗರ್ ಅವರು  ಆರ್ಟಿಐ ಅರ್ಜಿ ಸಲ್ಲಿಸಿದ  ಪ್ರಕಾರ ಲಭಿಸಿದ  ಮಾಹಿತಿಯಂತೆ ಹಿಂದಿನ  ಯುಡಿಎಫ್ ಆಡಳಿತ ಸಂದರ್ಭ  ಈ ರಸ್ತೆಗಾಗಿ ವಾರ್ಷಿಕವಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ, ಮಾನ್ಯ ವರೆಗೆ ಮೆಕ್ಕಾಡಂ ರಸ್ತೆ ಮಾಡಲಾಗಿತ್ತು . ಬಳಿಕ ಬಂದ  ಎಲ್ ಡಿಎಫ್ ಆಡಳಿತ ಮಂಡಳಿ ಹಾಗೂ ಎಡನೀರು-ಪುತ್ತಿಗೆ  (ಬಿಜೆಪಿ ಸದಸ್ಯರು) ಕಳೆದ ಐದು ವರ್ಷಗಳಲ್ಲಿ  ಒಂದು ರೂಪಾಯಿಯ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ.ಈಗ ಕನ್ಯಪ್ಪಾಡಿ ಮುಂಡಿತಡ್ಕ ರೋಡು ತೋಡಾಗಿ ಸಂಚಾರ ಯೋಗ್ಯತೆಯನ್ನು ಕಳಕೊಂಡಿದೆ.

ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಇತರ ರಸ್ತೆಗಳು ಉತ್ತಮವಾಗಿದ್ದು, ಜಿಲ್ಲಾ ಪಂಚಾಯತ್ ನಿಯಂತ್ರಣದಲ್ಲಿರುವ ಈ ರಸ್ತೆ ಮಾತ್ರ ದಯನೀಯ ಸ್ಥಿತಿಯಲ್ಲಿದೆ. ರಸ್ತೆಯ ತಕ್ಷಣ ದುರಸ್ತಿಯನ್ನು ಜಿಲ್ಲಾ ಪಂಚಾಯಿತಿಗೆ  ನಿರ್ವಹಿಸಲು ಸಾಧ್ಯವಾಗದಿದ್ದರೆ,  ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಹಸ್ತಾಂತರಿಸಬೇಕೆಂದು ಯುವ ಕಾಂಗ್ರೆಸ್ ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

Post a Comment

0 Comments