ಪೆರ್ಲ : ಗೋಳಿತ್ತಾರು ಶ್ರೀ ಸಿದ್ಧಿವಿನಾಯಕ ಭಜನ ಮಂದಿರದಲ್ಲಿ ನಡೆಯಲಿರುವ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಶ್ರೀ ಮಂದಿರದಲ್ಲಿ ಇಂದು (3.8.25)ಬೆಳಿಗ್ಗೆ ಬಿಡುಗಡೆ ಗೊಳಿಸಲಾಯಿತು. ಸಮಿತಿ ಅಧ್ಯಕ್ಷರಾದ ಕಮಲಾಕ್ಷ ಪೂಜಾರಿ ಕಾನ,ಕಾರ್ಯದರ್ಶಿ ವಿನೀತ್ ಕಾನ,ಸದಸ್ಯರಾದ ಜನಾರ್ಧನ ರೈ ಸೇರಾಜೆ, ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ನವೀನ್ ನಾಯಕ್ ಇಡ್ಯಾಳ, ಯತೀಶ್ ಸೇರಾಜೆ, ಪುಷ್ಪರಾಜ್ ಸೇರಾಜೆ, ಯೋಗೀಶ್ ಸೇರಾಜೆ, ವಿಜಯ ಲಕ್ಷ್ಮಿ ಇಡ್ಯಾಳ ಮೊದಲಾದವರು ಉಪಸ್ಥಿತರಿದ್ದರು.ಜತೆಕಾರ್ಯದರ್ಶಿ ಅಖಿಲೇಶ್ ಕಾನ ಸ್ವಾಗತಿಸಿ ಶ್ರನೀತ್ ರೈ ಸೇರಾಜೆ ವಂದಿಸಿದರು.
0 Comments