ಕೊಡ್ಲಮೊಗರು :ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರು ಇಲ್ಲಿ ತ್ರೋಬಾಲ್ ಅಸೋಸಿಯೇಶನ್ ನಡೆಸುವ 10ನೇ ಜಿಲ್ಲಾ ತ್ರೋಬಾಲ್ ಪಂದ್ಯಾಟ ನಡೆಯಿತು.ಶಾಲಾ ಪಿಟಿಎ ಅಧ್ಯಕ್ಷರಾದ ಅಬ್ದುಲ್ ಮಜಿದ್ ಇವರು ಪಂದ್ಯಾಟವನ್ನು ಉದ್ಘಾಟಿಸಿದರು.ತ್ರೋಬಾಲ್ ಅಸೋಸಿಯೇಷನ್ ಇದರ ಜಿಲ್ಲಾ ಅಧ್ಯಕ್ಷರಾದ ಸೂರ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಕೇರಳ ರಾಜ್ಯ ತ್ರೋಬಾಲ್ ಅಸೋಸಿಯೇಷನ್ ಇದರ ಉಪಾಧ್ಯಕ್ಷ ಶಶಿಕಾಂತ್ ಬಳ್ಳಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯನಿ ಕೃಷ್ಣವೇಣಿ ಬಿ ಸ್ವಾಗತಿಸಿದರು. ಜಿಲ್ಲಾ ತ್ರೋಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಸಂತೋಷ್ ಪಿ ಎಚ್, ಸ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿ ಮದನನ್ ಟಿ.ವಿ, ಪಿಟಿಎ ಎಕ್ಸಿಕ್ಯೂಟಿವ್ ಸದಸ್ಯರುಗಳಾದ ಹಮೀದ್ ಕಣಿಯಾರ್ ಅಹಮದ್ ಕುಂಞ್ಞ ಉಪಾಧ್ಯಕ್ಷರಾದ ಮೋಹನ ಬಿ ಹಾಗೂಎಲ್ಲಾ ಶಾಲೆಯ ದೈಹಿಕ ಶಿಕ್ಷಕ ರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕರಾದ ಉದಯ್ ಎಸ್ ಶೆಟ್ಟಿ ವಂದಿಸಿದರು
0 Comments