Ticker

6/recent/ticker-posts

ಮೀಯಪದವು ವಿದ್ಯಾವರ್ಧಕ ಶಾಲಾ ಮಕ್ಕಳ ಬಾಲ ಸಭೆ ಮತ್ತು ವಿವಿಧ ಕ್ಲಬ್‌ಗಳ ಉದ್ಘಾಟನೆ


 ಮೀಯಪದವು: ವಿದ್ಯಾವರ್ಧಕ ಶಾಲೆ ಮೀಯಪದವು ಇಲ್ಲಿನ ಕಿರಿಯ  ಪ್ರಾಥಮಿಕ ಮಟ್ಟದ ಬಾಲ ಸಭೆ ಮತ್ತು ವಿವಿಧ ಕ್ಲಬ್‌ಗಳ ಉದ್ಘಾಟನಾ ಸಮಾರಂಭವು ಶ್ರೀ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.ಪ್ರಾರಂಭದಲ್ಲಿ ಶಾಲಾ ಮಕ್ಕಳಾದ ಕು| ಮನಸ್ವಿನಿ ಎ,  ಕು| ಈಶ್ವರಿ ಡಿ  ಕು| ಸಾನ್ವಿ ರಾವ್ ಮತ್ತು ಮಾ| ಆಶ್ಲೇಷ್ ಯಂ ಪ್ರಾರ್ಥನೆ ಗೀತೆಯನ್ನು ಹಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪುಟಾಣಿಗಳು ಅತಿಥಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಾಲ ಸಭೆಯನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರು, ಸಾಹಿತಿಗಳಾದ ದಿವಾಕರ ಬಲ್ಲಾಳ್ ವಿವಿಧ ಕ್ಲಬ್‌ಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಉದ್ಘಾಟಿಸಿ, ಮಕ್ಕಳಿಗೆ ಕಥೆ ಮತ್ತು ಪದ್ಯದ ಮೂಲಕ ಬಾಲ ಸಭೆಯ ಮಹತ್ವವನ್ನು ತಿಳಿಸಿದರು. ಹಿರಿಯ ಅಧ್ಯಾಪಕರಾದ  ಬಾಲಕೃಷ್ಣ ಯಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು‌. ಬಾಲ ಸಭೆಯ ಅಧ್ಯಕ್ಷತೆಯನ್ನು 4 ನೇ ತರಗತಿಯ ವಿದ್ಯಾರ್ಥಿಯಾದ ಮಾ| ವಿಜೇಶ್ ವಹಿಸಿ ಮಾತನಾಡಿದರು. ಯು ಪಿ ಶಾಲಾ ಸಂಪನ್ಮೂಲ ತಂಡದ ಸಂಚಾಲಕರಾದ  ಶ್ರೀಲಕ್ಷ್ಮಿ ಬಿ ಹಾಗೂ ಎಲ್ ಪಿ ಶಾಲಾ ಸಂಪನ್ಮೂಲ ತಂಡದ ಸಂಚಾಲಕರಾದ  ಸುನಿಲ್ ಕುಮಾರ್ ಯಂ ಉಪಸ್ಥಿತರಿದ್ದರು.ವಿವಿಧ ಕ್ಲಬ್‌ಗಳ ಆಶ್ರಯದಲ್ಲಿ  ದಿನಾಚರಣೆಗಳ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕು| ಅಝ್ಮಾ ಫಾತಿಮ ಮತ್ತು ಕು| ಅಸ್ಲಾ ನಡೆಸಿಕೊಟ್ಟರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ  ದಿವಾಕರ ಬಲ್ಲಾಳ್ ಇವರಿಗೆ ಶಾಲಾ ಮುಖ್ಯೋಪಾಧ್ಯಾಯರು ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು.ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕು| ಧನ್ವಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕು| ಭುವಿ ಯಸ್ ಧನ್ಯವಾದವಿತ್ತರು. ನಾಲ್ಕನೆಯ ತರಗತಿಯ ವಿದ್ಯಾರ್ಥಿನಿಯರಾದ ಕು| ಲಿಖಿತಾ ಕೆ ಯಂ ಮತ್ತು ಕು| ಗೀತಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಪ್ರತಿಭಾ ಅನಾವರಣ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳಾದ ಕು| ಸಿಂಚನ ಯನ್ ಯಸ್4C,ಕು| ಫಾತಿಮತ್ ಸಿಝಾ4C,ಕು| ಅನಘ 3A,ಕು| ಮುನೀಶಾ 3C,ಕು| ಫಾಹಿಮ 4C, ಮಾ| ಯಜ್ಙೇಶ್ 4C,ಕು| ಫಾತಿಮತ್ ಶಿಫಾ ,ಮಾ| ಮುಷ್ತಾಕ್ 3B,ಕು ಅಝ್ಮಾ ಫಾತಿಮ 4C, ಮಾ| ಮೊಹಮ್ಮದ್ ಹನೀನ್ 3C ನಡೆಸಿಕೊಟ್ಟರು.ಕೆಲವು ಮಕ್ಕಳ ಹೆತ್ತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.

Post a Comment

0 Comments