ಕಾಸರಗೋಡು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ವಲಯ ಹಾಗೂ ಬಿಇಎಂ ಹೈಸ್ಕೂಲ್ ಕಾಸರಗೋಡು ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊಫೆಸರ್ ಶ್ರೀ ನಾಥ್ ರವರು ವಿದ್ಯಾರ್ಥಿಗಳನ್ನು ಕುರಿತು ಇಂದಿನ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಅರಳುವ ಹೂಗಳು ಹಾಗಾಗಿ ಜೀವನದಲ್ಲಿ ಸ್ವರ್ಗವನ್ನು ಕಾಣಬೇಕಾದರೆ ದುಶ್ಚಟ ಕ್ಕೆ ಬಲಿಯಾಗಬೇಡಿ. ದುಶ್ಚಟ ಕ್ಕೆ ಬಲಿಯಾದರೆ ನರಕದ ಜೀವನವನ್ನು ನಡೆಸಬೇಕಾಗುತ್ತದೆ. ಹಾಗೂ ಮಾದಕ ವಸ್ತು ಸೇವನೆಯಿಂದ ಧೈರ್ಯ, ಆತ್ಮವಿಶ್ವಾಸ, ಮಾನಸಿಕ ಸೀಮಿತವನ್ನು ಕಳೆದುಕೊಳ್ಳುತ್ತೇವೆ. ಬುದ್ಧಿ ಭ್ರಮಣೆ, ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಎದುರಾಗುವ ಸಾಧ್ಯತೆಗಳಿವೆ. ಏಡ್ಸ್ ಕಾಯಿಲೆ ಒಬ್ಬ ವ್ಯಕ್ತಿಗೆ ನೋವು ಕೊಡುತ್ತದೆ ಆದರೆ ದುಶ್ಚಟಕ್ಕೆ ಒಳಗಾದ ವ್ಯಕ್ತಿ ತನ್ನ ಕುಟುಂಬ ಸಮಾಜಕ್ಕೆ ನೋವನ್ನುಂಟು ಮಾಡುತ್ತಾನೆ. ಹಾಗಾಗಿ ಪ್ರಥಮವಾಗಿ ಒಬ್ಬ ವ್ಯಕ್ತಿ ತನ್ನನ್ನು ತಾನು ಮೊದಲು ಪ್ರೀತಿಸಬೇಕು. ತನ್ನನ್ನು ತಾನು ಪ್ರೀತಿಸಿದರೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ತನ್ನ ತಂದೆ ತಾಯಿಗೆ , ಗುರುಗಳಿಗೆ ಊರಿಗೆ , ಮುಂದಿನ ಸಮಾಜಕ್ಕೆ ತಾನು ಒಬ್ಬ ಉತ್ತಮ ಸದೃಢ ಪ್ರಜೆಯಾಗಬಹುದು ಎಂದು ತಿಳಿಸುತ್ತಾ. ಮಾದಕ ವ್ಯಸನಕ್ಕೆ ಬಲಿಯಾದರೆ ಆರೋಗ್ಯ ಸಾಮಾಜಿಕವಾಗಿ ಆಗುವ ಪರಿಣಾಮಗಳ ಬಗ್ಗೆ ಸವಿವರವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮಿ ಭಜನಾ ಪರಿಷತ್ತಿನ ಅಧ್ಯಕ್ಷ ಡಾ.ಕೆ.ಎನ್.ವೆಂಕಟರಮಣ ಹೊಳ್ಳ. ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಕೆ. ವಾಯು ಸೇನೆಯ ನಿವೃತ್ತ ಅಧಿಕಾರಿ ತಿರುಮಲೇಶ್ವರ್ ಭಟ್ ಮೊದಲಾದವರು ಭಾಗವಹಿಸಿದ್ದರು. ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಸ್ವಾಗತಿಸಿ ಶೋಭಾ ವಂದಿಸಿದರು.
0 Comments