ಕೊಚ್ಚಿನ್: ಮಲಯಾಳಂ ಚಲನಚಿತ್ರ ಹಾಸ್ಯ ನಟ, ಮಿಮಿಕ್ರಿ ತಾರೆ ಕಲಾಭವನ್ ನವಾಸ್(51) ನಿಧನರಾದರು. ಅವರು ಮೃತಪಟ್ಟ ಸ್ಥಿತಿಯಲ್ಲಿ ಚೋಟ್ಟಾಣಿಕ್ಕರ ವಸತಿಗೃಹವೊಂದರಲ್ಲಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಪ್ರಕಂಪನಂ ಎಂಬ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಚೋಟ್ಟಾಣಿಕ್ಕರೆಗೆ ಬಂದಿದ್ದು ವಸತಿಗೃಹದಲ್ಲಿ ತಂಗಿದ್ದರು. ಕಲಾಭವನ್ ಮಿಮಿಕ್ರಿ ತಂಡದ ಸದಸ್ಯರಾಗಿದ್ದ ಅವರು ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದರು.1995 ರಲ್ಲಿ ಚೈತನ್ಯ ಎಂಬ ಚಿತ್ರದ ಮೂಲಕ ಮಲಯಾಳಂ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಹಿಟ್ಲರ್ ಬ್ರದರ್ಸ್, ಚೂನಿಯರ್ ಮಾಂಡ್ರೆಕ್, ಮಾಟ್ಟುಪೆಟ್ಟಿ ಮಚ್ಚಾನ್, ತಿಲ್ಲಾನ ತಿಲ್ಲಾನ ಎಂಬಿವು ನವಾಸ್ ಅಭಿನಯಿಸಿದ ಪ್ರಮುಖ ಚಿತ್ರಗಳು.
0 Comments