Ticker

6/recent/ticker-posts

ಪರಿಶಿಷ್ಟ ವಲಯಗಳಲ್ಲಿ‌ ಅಭಿವೃದ್ದಿ ಶೂನ್ಯ; ದೇಲಂಪಾಡಿ ಪಂಚಾಯತು ಕಚೇರಿಗೆ ಬಿಜೆಪಿ‌ ಮುತ್ತಿಗೆ


 ಅಡೂರು: ದೇಲಂಪಾಡಿ ಪಂಚಾಯತಿನಲ್ಲಿ ಪರಿಶಿಷ್ಟ ಜಾತಿ- ವರ್ಗ ವಿಭಾಗವನ್ನು ಆಡಳಿತ ಸಮಿತಿ ಅವಗಣಿಸುತ್ತಿದೆಯೆಂದು ಬಿಜೆಪಿ ರಾಜ್ಯ ಸೆಲ್ ಸಂಯೋಜಕ ಅಡ್ವ.ವಿ.ಕೆ.ಸಜೀವನ್ ಹೇಳಿದರು. ಹಲವು ವರ್ಷಗಳ ಕಾಲ ಸಿಪಿಎಂ ಆಡಳಿತ ನಡೆಸಿದ ಗ್ರಾಮ‌ಪಂಚಾಯತಿನ ಪರಿಶಿಷ್ಟ ವಲಯಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದವರು ಹೇಳಿದರು.

  ಬಿಜೆಪಿ ಅಡೂರು ವಲಯ ಸಮಿತಿಯ ಆಶ್ರಯದಲ್ಲಿ ‌ದೇಲಂಪಾಡಿ ಪಂಚಾಯತು ಮುತ್ತಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು.

   ಏರಿಯ ಅಧ್ಯಕ್ಷ ರಾಜೇಶ್ ಪಾಂಡಿ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮಿಳಾ ಸಿ ನಾಯಕ್,  ಪದಾಧಿಕಾರಿಗಳಾದ ಮಹೇಶ್ ಗೋಪಾಲ್, ದಿಲೀಪ್ ಪಳ್ಳಂಜಿ, ವಿವೇಕಾನಂದ ಅಡೂರು, ನಾರಾಯಣನ್ ಮಾಸ್ತರ್,  ರಾಜು ಕೋರಿಕಂಡ ಮೊದಲಾದವರು ನೇತೃತ್ವ ವಹಿಸಿದ್ದರು

Post a Comment

0 Comments